ಉದ್ಯೋಗ ವಿವರಣೆ:
ಕರ್ನಾಟಕ ವಿದ್ಯುತ್ ಪ್ರಸರಣ ಕಾರ್ಪೊರೇಶನ್ ಲಿಮಿಟೆಡ್ (KPTCL) ಕಿರಿಯ ಸ್ಥಾವರ ಸಹಾಯಕ ಮತ್ತು ಕಿರಿಯ ವಿದ್ಯುತ್ ಹುದ್ದೆಗಳಿಗಾಗಿ ಒಟ್ಟು 2,975 ಹುದ್ದೆಗಳ ನೇಮಕಾತಿಯನ್ನು ಪ್ರಕಟಿಸಿದೆ. ಈ ಉದ್ಯೋಗವು ವಿದ್ಯುತ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.
ಉದ್ಯೋಗದ ವಿವರಗಳು:
ಶಿಕ್ಷಣ ಅರ್ಹತೆ ( Educational Qualification) :
- ಕಿರಿಯ ಸ್ಥಾವರ ಸಹಾಯಕ: 10ನೇ ಅಥವಾ 12ನೇ ತರಗತಿ ಓದಿರಬೇಕು.
- ಕಿರಿಯ ವಿದ್ಯುತ್: ಸಂಬಂಧಿತ ಕ್ಷೇತ್ರದಲ್ಲಿ ಡಿಗ್ರಿ ಅಥವಾ B.Tech ಇರಬೇಕು.
ವಯೋಮಿತಿ ( Age Limit ):
- ಅರ್ಜಿ ಹಾಕುವವರು 18 ರಿಂದ 35 ವರ್ಷ ಮದ್ಯದ ವ್ಯಕ್ತಿಗಳು ಆಗಿರಬೇಕು
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC/ST) ಮತ್ತು ಇತರ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಮೀಸಲಾತಿ (Reservation):
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಸಡಿಲಿಕೆ
- ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ.
ಅರ್ಜಿಯ ಶುಲ್ಕ ( Application Fee ) :
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ (SC/ST/PWD) ಅಭ್ಯರ್ಥಿಗಳಿಗೆ: ₹378
- ಸಾಮಾನ್ಯ/2A/2B/3A/3B ಅಭ್ಯರ್ಥಿಗಳಿಗೆ: ₹614
ಆಯ್ಕೆ ವಿಧಾನ ( Selection Process ) :
- ಶ್ರೇಣೀ ಪಟ್ಟಿ ( Merit List ) : ಶ್ರೇಣೀ ಪಟ್ಟಿ ಮತ್ತು ಶ್ರೇಣೀಗಳ ಮೇಲೆ ಆಧಾರಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
- ಕನ್ನಡ ಭಾಷಾ ಪರೀಕ್ಷೆ: ಕನ್ನಡ ಭಾಷಾ ಪ್ರಾವೀಣ್ಯತೆ ಪರೀಕ್ಷೆ ನಡೆಸಲಾಗುವುದು.
- ನಿಪುಣತೆ ಪರೀಕ್ಷೆ: ಸಮಸ್ಯೆ ಪರಿಹಾರ ಮತ್ತು ಕಾರಣಿಕತೆಗೆ ಸಂಬಂಧಿಸಿದ ಪ್ರಮಾಣೀಕರಣ.
ಅರ್ಜಿ ಸಲ್ಲಿಸುವುದು ಹೇಗೆ :
- KPTCL ಅಧಿಕೃತ ವೆಬ್ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿ.
- ನಿಗದಿತ ಆನ್‌ಲೈನ್ ಮಾರ್ಗದ ಮೂಲಕ ಅರ್ಜಿಯ ಶುಲ್ಕವನ್ನು ಪಾವತಿಸಿ
- ನೋಂದಣಿ ಮಾಡಿ, ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ಪಾವತಿ ಮಾಡಿ, ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿಯನ್ನು ಸಲ್ಲಿಸಿ.
ಮುಖ್ಯ ದಿನಾಂಕಗಳು:
- ಅರ್ಜಿಯ ಆರಂಭ ದಿನಾಂಕ: ಅಕ್ಟೋಬರ್ 14, 2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 21, 2024
- ಅರ್ಜಿಯ ಕೊನೆಯ ದಿನಾಂಕ: ನವೆಂಬರ್ 20, 2024
- ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ನವೆಂಬರ್ 25, 2024
- ಪರೀಕ್ಷಾ ದಿನಾಂಕ: ನಂತರದ ದಿನಾಂಕವು ಪ್ರಕಟಿಸಲಾಗುವುದು.