ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ: ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿಯ ಅವಕಾಶ.

Pension
WhatsApp Group Join Now
Telegram Group Join Now

ವಯಸ್ಸಾದಾಗ ದುಡಿಯುವ ಶಕ್ತಿ ಕಡಿಮೆಯಾಗುತ್ತದೆ ಮತ್ತು ಇತರರ ಮೇಲೆ ಅವಲಂಬನೆಯ ಅಗತ್ಯತೆ ಹೆಚ್ಚಾಗುತ್ತದೆ. ಈ ಹಿನ್ನಲೆಯಲ್ಲಿ, ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಒದಗಿಸಲು ಭಾರತ ಸರ್ಕಾರವು “ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ”ಯನ್ನು ಜಾರಿಗೊಳಿಸಿದೆ. ಈ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಮಾಸಿಕ ಪಿಂಚಣಿಯನ್ನು ನೀಡುತ್ತದೆ.

ಯೋಜನೆಯ ಉದ್ದೇಶ:

ಈ ಯೋಜನೆಯ ಮುಖ್ಯ ಗುರಿಯು ಹಿರಿಯ ನಾಗರಿಕರ ಮೂಲಭೂತ ಅಗತ್ಯಗಳನ್ನು ಪೂರೈಸಲು ಆರ್ಥಿಕ ನೆರವನ್ನು ನೀಡುವುದು ಹಾಗೂ ಅವರ ಜೀವನಮಟ್ಟವನ್ನು ಸುಧಾರಿಸುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಲ್ಲಿದೆ.

ಪಿಂಚಣಿ ಪಡೆಯುವ ವಯೋಮಿತಿ :

– 60 ರಿಂದ 64 ವರ್ಷದೊಳಗಿನವರ – ಪ್ರತಿ ತಿಂಗಳು ₹600

– 65 ವರ್ಷ ಮತ್ತು ಮೇಲ್ಪಟ್ಟವರು– ಪ್ರತಿ ತಿಂಗಳು ₹1200.

ಅರ್ಹತಾ ಮಾನದಂಡಗಳು :

– ಅರ್ಜಿದಾರರು 60 ವರ್ಷ ಅಥವಾ ಹೆಚ್ಚು ವಯಸ್ಸಿನವರು ಆಗಿರಬೇಕು

– ಬಡತನ ರೇಖೆಗಿಂತ ಕೆಳಗಿನ ಕುಟುಂಬದವರು (BPL ಕಾರ್ಡ್ ಹೊಂದಿರಬೇಕು)

– ವಾರ್ಷಿಕ ಆದಾಯ ₹32,000 ಕ್ಕಿಂತ ಕಡಿಮೆ ಇರಬೇಕು

– ಬೇರೆ ಯಾವುದೇ ಸರ್ಕಾರಿ ಅಥವಾ ಖಾಸಗಿ ಪಿಂಚಣಿಯನ್ನು ಪಡೆದಿರಬಾರದು

– ಗಂಡು ಮಕ್ಕಳು ಇದ್ದರೂ ಪಿಂಚಣಿಗೆ ಅರ್ಹರಾಗಬಹುದು.

ಅರ್ಜಿ ಸಲ್ಲಿಸುವ ವಿಧಾನ :

ಆಫ್‌ಲೈನ್ ವಿಧಾನ:

– ನಿಮ್ಮ ಊರಿನ ಗ್ರಾಮ ಪಂಚಾಯಿತಿ ಕಚೇರಿ,ತಾಲೂಕು ಕಚೇರಿ, ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ

– ಅರ್ಜಿ ಫಾರ್ಮ್ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬಹುದು.

ಆನ್‌ಲೈನ್ ವಿಧಾನ:

1. [sevasindhu.karnataka.gov.in](https://sevasindhu.karnataka.gov.in) ಗೆ ತೆರಳಿ

2. “ವಿಭಾಗಗಳು ಮತ್ತು ಸೇವೆಗಳು” ವಿಭಾಗದಲ್ಲಿ “ಇಂದಿರಾ ಗಾಂಧಿ ವೃದ್ಧಾಪ್ಯ ಪಿಂಚಣಿ” ಆಯ್ಕೆಮಾಡಿ

3. “ಆನ್‌ಲೈನ್‌ನಲ್ಲಿ ಅನ್ವಯಿಸು” ಕ್ಲಿಕ್ ಮಾಡಿ

4. ಲಾಗಿನ್ ಮಾಡಿ ಅಥವಾ ಹೊಸದಾಗಿ ನೋಂದಣಿ ಮಾಡಿ

5. ಅರ್ಜಿದಾರರ ಮಾಹಿತಿಯನ್ನು ಭರ್ತಿ ಮಾಡಿ

6. ದಾಖಲೆಗಳನ್ನು ಲಗತ್ತಿಸಿ, ಇ-ಸಹಿ ಮಾಡಿ

7. ಅರ್ಜಿಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ8. ಅರ್ಜಿ ಸಲ್ಲಿಕೆ ರಶೀದಿ ಪಡೆಯಿರಿ.

ಅಗತ್ಯ ದಾಖಲೆಗಳು.

– ಅರ್ಜಿದಾರರ ಫೋಟೋ

– ಪಡಿತರ ಚೀಟಿ (BPL ಕಾರ್ಡ್)

– ಮತದಾರರ ಗುರುತಿನ ಚೀಟಿ

– ವಾಸಸ್ಥಳ ಪ್ರಮಾಣಪತ್ರ

– ವಯಸ್ಸಿನ ಪ್ರಮಾಣಪತ್ರ

– ಆದಾಯ ಪ್ರಮಾಣಪತ್ರ

– ಪಾಸ್ ಬುಕ್ ನ ಪ್ರತೀ

– ಗಂಡನ ಮರಣ ಪ್ರಮಾಣಪತ್ರ (ಅವಶ್ಯಕವಿದ್ದರೆ)

– ಆಧಾರ್ ಕಾರ್ಡ್ (ವಿಳಾಸ ಪುರಾವೆಗಾಗಿ).

ವಯೋವೃದ್ಧರಿಗೆ ಇದು ಬದುಕಿನ ಭದ್ರತೆಯ ಸೇತುವೆ. ಈ ಯೋಜನೆಯ ಮೂಲಕ ಅನೇಕ ಹಿರಿಯರು ತಮ್ಮ ಬದುಕನ್ನು ಸ್ವಾಭಿಮಾನದಿಂದ ನಡೆಸಿಕೊಳ್ಳಲು ಸಾಧ್ಯವಾಗುತ್ತಿದೆ.

WhatsApp Group Join Now
Telegram Group Join Now

Leave a Comment