ನಿಮ್ಮದೇ ಉದ್ಯಮಕ್ಕೆ ಬೆಂಬಲ: ಮಾದಿಗ ಸಮುದಾಯದ ನಿರುದ್ಯೋಗಿಗಳಿಗೆ ನೇರ ಸಾಲ ಯೋಜನೆಯಿಂದ ₹1 ಲಕ್ಷ ನೆರವು!

Loan
WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ(KCLDCL) ತಂದಿರೋ ವಿಶೇಷ ಯೋಜನೆ – ನೇರ ಸಾಲ ಯೋಜನೆ, ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ನಿರುದ್ಯೋಗಿಗಳಿಗೆ ಹೊಸ ಜೀವನದ ಆಶಾಕಿರಣವನ್ನೂ, ಉದ್ಯೋಗದ ಬಾಗಿಲನ್ನೂ ತೆರೆದಿದೆ.

ಈ ಯೋಜನೆಯ ಉದ್ದೇಶ ಸ್ಪಷ್ಟ – ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಿ, ಬದುಕಿಗೆ ಬಲ ನೀಡುವುದು. ಸಣ್ಣ ವ್ಯಾಪಾರ ಪ್ರಾರಂಭಿಸಲು ಹಣದ ಕೊರತೆಯಿರುವವರಿಗೆ ಇದು ಅಪೂರ್ವ ಅವಕಾಶವಾಗಿದೆ.

ಯಾರು ಅರ್ಹರು :

– ಅರ್ಜಿದಾರನು ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿರಬೇಕು.

– 18 ರಿಂದ 50 ವರ್ಷ ವಯಸ್ಸಿನೊಳಗಿನ ಪುರುಷರು ಮತ್ತು ಮಹಿಳೆಯರು ಅರ್ಜಿ ಹಾಕಬಹುದು.

– ವಾರ್ಷಿಕ ಕುಟುಂಬ ಆದಾಯ: ಗ್ರಾಮೀಣ ಪ್ರದೇಶದಲ್ಲಿ ₹1.5 ಲಕ್ಷ, ನಗರದಲ್ಲಿ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು.

– ಅರ್ಜಿದಾರ ಅಥವಾ ಅವರ ಕುಟುಂಬದ ಸದಸ್ಯರು ಸರ್ಕಾರದಿಂದ ಈಗಾಗಲೇ ₹1 ಲಕ್ಷಕ್ಕಿಂತ ಹೆಚ್ಚು ಸೌಲಭ್ಯ ಪಡೆದಿರಬಾರದು.

– ಸರ್ಕಾರಿ ಉದ್ಯೋಗದಲ್ಲಿರುವವರ ಕುಟುಂಬದ ಸದಸ್ಯರು ಅರ್ಹರಲ್ಲ.

– ಸ್ವಂತ ಜಾಗ ಅಥವಾ ಘಟಕ ಸ್ಥಾಪನೆಗೆ ಬೇಕಾದ ಸ್ಥಳ ಇರಬೇಕು.

ಸೌಲಭ್ಯಗಳೇನು?

ಒಟ್ಟು ರೂ. 1,00,000/- ಧನ ಸಹಾಯ:

– ₹50,000/- ಮುಕ್ತ ಸಹಾಯಧನ (ಸಬ್ಸಿಡಿ)

– ₹50,000/- ಕಡಿಮೆ ಬಡ್ಡಿದರದ ಸಾಲ (ಶೇ. 4ರ ಬಡ್ಡಿ, 30 ಕಂತುಗಳಲ್ಲಿ ಮರುಪಾವತಿ)

ಇನ್ನೊಂದು ಆಯ್ಕೆ:ಹೆಚ್ಚು ಲಾಭದಾಯಕ ಚಟುವಟಿಕೆಗಳಿಗಾಗಿ ₹25,000 ಸಹಾಯಧನ + ₹25,000 ಸಾಲ.

ಯಾವ ಉದ್ಯಮಗಳಿಗೆ ಪ್ರೋತ್ಸಾಹ :

– ಪೆಟ್ಟಿಗೆ ಅಂಗಡಿ

– ಸಿದ್ಧ ಉಡುಪು ಅಂಗಡಿ

– ಕುರಿ, ಮೇಕೆ, ಕೋಳಿ, ಹಂದಿ ಸಾಕಣೆ

– ಹಣ್ಣು-ತರಕಾರಿ ಮಾರಾಟ

– ಮೀನು ಮಾರಾಟ

– ಟೈಲರಿಂಗ್

– ಹ್ಯೆನುಗಾರಿಕೆ, ಮೊಲ ಸಾಕಣೆ

– ಇತರೆ ಸಣ್ಣ ಕೈಗಾರಿಕೆಗಳು

ಅರ್ಜಿಯ ವಿಧಾನ :

1. ಸೇವಾ ಸಿಂಧು ಪೋರ್ಟಲ್ ([https://sevasindhu.karnataka.gov.in/Sevasindhu/Kannada](https://sevasindhu.karnataka.gov.in/Sevasindhu/Kannada)) ಗೆ ಭೇಟಿ ನೀಡಿ

2. “ಇಲಾಖೆ ಮತ್ತು ಸೇವೆಗಳು” > “ಸಮಾಜ ಕಲ್ಯಾಣ ಇಲಾಖೆ” > “ನೇರ ಸಾಲ ಯೋಜನೆ” ಆಯ್ಕೆಮಾಡಿ

3. “ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ” ಕ್ಲಿಕ್ ಮಾಡಿ

4. ನಿಮ್ಮ ಮಾಹಿತಿ, ಬ್ಯಾಂಕ್ ವಿವರ, ದಾಖಲೆಗಳನ್ನು ಭರ್ತಿ ಮಾಡಿ

5. ಅರ್ಜಿ ಸಲ್ಲಿಸಿ, ಅರ್ಜಿ ಐಡಿಯನ್ನು ಪಡೆದುಕೊಳ್ಳಿ.

ದಾಖಲೆಗಳು :

-ಭಾವಚಿತ್ರ

– ಜಾತಿ ಮತ್ತು ಆದಾಯ ಪ್ರಮಾಣಪತ್ರ

– ಪಡಿತರ ಚೀಟಿ

– ಗುರುತಿನ ಚೀಟಿ (ಆಧಾರ್/ಮತದಾರ ಗುರುತು ಇತ್ಯಾದಿ)

– ತರಬೇತಿ ಪ್ರಮಾಣಪತ್ರ (ಇದಿದ್ದರೆ)

– ದರಪಟ್ಟಿ ಹಾಗೂ ಯೋಜನಾ ವರದಿ.

ಸಂಪರ್ಕಿಸಿ :

ಕಾರ್ಯಾಲಯ ವಿಳಾಸ:

ನಂ.10, 3ನೇ ಮಹಡಿ, ಖಾದಿ ಭವನ, ಜಸ್ಮಾ ದೇವಿ ಭವನ ರಸ್ತೆ, ವಸಂತನಗರ, ಬೆಂಗಳೂರು-560052

ಇಮೇಲ್: [mdkmvstdc@gmail.com](mailto:mdkmvstdc@gmail.com)

ದೂರವಾಣಿ: 080-29901193

ಸಹಾಯವಾಣಿ:9482300400 / 8277799990.

ಸ್ವಯಂ ಉದ್ಯೋಗದ ಕನಸು ಹೊತ್ತವರಿಗೆ ಇದು ಒಳ್ಳೆಯ ಅವಕಾಶ. ನಿಮ್ಮ ಉದ್ಯಮದ ಬುನಾದಿಗೆ ಸರ್ಕಾರದ ಬೆಂಬಲ ಬೇಕಾ? ‘ನೇರ ಸಾಲ ಯೋಜನೆ’ ದಾರಿ ತೋರಿಸುತ್ತದೆ!

WhatsApp Group Join Now
Telegram Group Join Now

Leave a Comment