DUDC ಉತ್ತರ ಕನ್ನಡ 2024 ರ ನೇಮಕಾತಿ ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನ! ಸರ್ಕಾರಿ ಉದ್ಯೋಗ ಬಯಸುವ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

DUDC ಉತ್ತರ ಕನ್ನಡ ನೇಮಕಾತಿ 2024
ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆಯ ವಿವರಗಳೊಂದಿಗೆ DUDC ಉತ್ತರ ಕನ್ನಡ ನೇಮಕಾತಿ 2024 ಪ್ರಕಟಣೆ
WhatsApp Group Join Now
Telegram Group Join Now

Table of Contents

DUDC ಉತ್ತರ ಕನ್ನಡ ನೇಮಕಾತಿ 2024 ಬಗ್ಗೆ :

ಪ್ರಸಕ್ತ ಸಾಲಿನ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ DUDC ಉತ್ತರ ಕನ್ನಡ ವಿಭಾಗ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಪೌರ ಕಾರ್ಮಿಕ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಲು ಅಧಿಸೂಚನೆ ಹೊರಡಿಸಿದೆ.ಉದ್ಯೋಗಾಕಾಂಕ್ಷಿಗಳು ಉತ್ತರ ಕನ್ನಡ – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಡಿಸೆಂಬರ್ 16-2024 ರ ಮೊದಲು ಆಫ್‌ಲೈನ್‌ನ ಮೂಲಕ ಈ ಹುದ್ದೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

DUDC ಉತ್ತರ ಕನ್ನಡ ನೇಮಕಾತಿ 2024 ಪ್ರಮುಖ ಅಂಶಗಳು ಹೀಗಿವೆ;

ವಿಭಾಗ ವಿವರ
ಸಂಸ್ಥೆಯ ಹೆಸರು ಜಿಲ್ಲಾ ನಗರಾಭಿವೃದ್ಧಿ ಕೋಶ ಉತ್ತರ ಕನ್ನಡ (DUDC ಉತ್ತರ ಕನ್ನಡ)
ಹುದ್ದೆಯ ಹೆಸರು ಪೌರಕಾರ್ಮಿಕ
ಖಾಲಿ ಹುದ್ದೆಗಳ ಸಂಖ್ಯೆ45
ಸ್ಥಳ ಉತ್ತರ ಕನ್ನಡ – ಕರ್ನಾಟಕ
ವೇತನ ಶ್ರೇಣಿ ರೂ.27000-46675/- ಪ್ರತಿ ತಿಂಗಳು
ಕೊನೆಯ ಅವಕಾಶ ಅರ್ಜಿ ಸಲ್ಲಿಸಲು 16-ಡಿಸೆಂಬರ್-2024
ಅಧಿಕೃತ ವೆಬ್ ಸೈಟ್ https://uttarakannada.nic.in/en/urban-development-cell/

DUDC ಉತ್ತರ ಕನ್ನಡ ನೇಮಕಾತಿ 2024 ಅರ್ಹತೆಗಳ ವಿವರ:

ಶೈಕ್ಷಣಿಕ ಅರ್ಹತೆ :

ಪೌರ ಕಾರ್ಮಿಕರ ಹುದ್ದೆಗೆ ಯಾವದೇ ರೀತಿಯ ವಿದ್ಯಾರ್ಹತೆ ಅಗತ್ಯವಿಲ್ಲ ಆದರೆ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಮಾತಾಡಲು ಬರಬೇಕು.

ವಯೋಮಿತಿ :

DUDC ಉತ್ತರ ಕನ್ನಡ ನೇಮಕಾತಿ 2024 ಅಧಿಸೂಚನೆಯಲ್ಲಿ ತಿಳಿಸಿದಂತೆ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯ 55 ವರ್ಷಗಳಿಗಿಂತ ಮೀರಿರಬಾರದು.

  • ಅಭ್ಯರ್ಥಿಗಳ ವಯಸನ್ನು ಶೈಕ್ಷಣಿಕ ದಾಖಲೆಗಳು / ಆಧಾರ್ ಕಾರ್ಡ್ / ಮತದಾರರ ಗುರುತಿನ ಚೀಟಿ/ ಪಡಿತರ ಚೀಟಿ ಆಧಾರದ ಮೇಲೆ ನಿರ್ಧರಿಸಲಾಗುವುದು.

ವಯೋಮಿತಿ ಸಡಿಲಿಕೆ :

DUDC ಉತ್ತರ ಕನ್ನಡ ನೇಮಕಾತಿ 2024 ಅಧಿಸೂಚನೆಯ ಪ್ರಕಾರ ವಯೋಮಿತಿ ಸಡಿಲಿಕೆ ಕಲ್ಪಿಸಲಾಗುವುದು.

DUDC ಉತ್ತರ ಕನ್ನಡ ನೇಮಕಾತಿ ಅರ್ಜಿ ಶುಲ್ಕಗಳ ಮಾಹಿತಿ ಇಲ್ಲಿದೆ:

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600/- ಅರ್ಜಿ ಶುಲ್ಕ ನಿಗದಿ ಪಡಿಸಿದೆ
  • ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ. 300 /- ಅರ್ಜಿ ಶುಲ್ಕ ನಿಗದಿ ಪಡಿಸಿದೆ.
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ .50/- ಅರ್ಜಿ ಶುಲ್ಕ ನಿಗದಿ ಪಡಿಸಿದೆ.
  • ಇನ್ನುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

DUDC ಉತ್ತರ ಕನ್ನಡ ನೇಮಕಾತಿಯ ಅಯ್ಕೆ ವಿಧಾನ

  • ಈ ನೇಮಕಾತಿ ಗೆ ಅಭ್ಯರ್ಥಿಗಳನ್ನು ಆಯಾ ವರ್ಗಗಳ ಪ್ರಕಾರ ಆಯ್ಕೆ ಮತ್ತು ಕಾರ್ಯ ಅನುಭವದ ಹಾಗೂ ಮಾನಸಿಕ ಮತ್ತು ದೈಹಿಕ ಆರೋಗ್ಯ ಸದೃಢತೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
DUDC ಉತ್ತರ ಕನ್ನಡ ನೇಮಕಾತಿ 2024 ಗಾಗಿ ನಿಮ್ಮ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಕುರಿತು ಹಂತ-ಹಂತದ ಮಾರ್ಗದರ್ಶಿ ಇಲ್ಲಿದೆ

DUDC ಉತ್ತರ ಕನ್ನಡ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು ಅಫ್ಲೈನ್ ಮೂಲಕ ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಬೇಕಾಗಿದೆ.

  • ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸತಕ್ಕದ್ದು.
  • ಅಭ್ಯರ್ಥಿಗಳು ಅರ್ಜಿಯಲ್ಲಿ ಕೋರುವ ಎಲ್ಲ ಮೀಸಲಾತಿ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕದೊಳಗೆ ಅಧಿಸೂಚನೆಯ ಅನುಬಂದದಲ್ಲಿ ಇರುವ ನಮೂನೆಗಳಲ್ಲಿಯೇ ಕಡ್ಡಾಯವಾಗಿ ಪಡೆದಿಟ್ಟುಕೊಂಡಿರತಕ್ಕದ್ದು.
  • ಅರ್ಜಿಯನ್ನು ಸರಿಯಾದ ಮಾಹಿತಿಯನ್ನು ನೀಡುವ ಮೂಲಕ ಯಾವುದೇ ತಪ್ಪುಗಳಿಲ್ಲದೆ ಪೂರ್ಣಗೊಳಿಸಿ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸಲು ಸೂಚಿಸಿದೆ.
  • ಭರ್ತಿ ಮಾಡಿದ ಅರ್ಜಿಗಳ್ನು ಅಭ್ಯರ್ಥಿಗಳು ನಗರ ಸ್ಥಳೀಯ ಸಂಸ್ಥೆಗಳಿಗೆ ನೇರವಾಗಿ ಸಲ್ಲಿಸಿ ಸ್ವೀಕೃತಿ ಪಡೆಯತಕ್ಕದ್ದು.
  • ಆರ್ಜಿಗಳನ್ನು ಪ್ರತ್ಯೇಕವಾಗಿ ಅಂಚೆ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ.

DUDC ಉತ್ತರ ಕನ್ನಡ ನೇಮಕಾತಿ ಪ್ರಮುಖ ದಿನಾಂಕಗಳು ಇಲ್ಲಿದೆ:

  • ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ : 15 – 11 – 2024
  • ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 16 – 12 – 2024

WhatsApp Group Join Now
Telegram Group Join Now

Leave a Comment