ಕೃಷಿಕರು ಇಂದಿನ ಹೊಲಗಟ್ಟಲಿನಲ್ಲಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನೀರಾವರಿ ಪ್ರಮುಖವಾಗಿದ್ದು, ಅದನ್ನು ಪರಿಹರಿಸಲು ಕರ್ನಾಟಕ ಸರ್ಕಾರ ಪ್ರಭಾವಿ ಯೋಜನೆಯಾದ “ಗಂಗಾ ಕಲ್ಯಾಣ ನೀರಾವರಿ ಯೋಜನೆ”ಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಅಲ್ಪಸಂಖ್ಯಾತ ಸಮುದಾಯದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಉಚಿತ ಬೋರ್ವೆಲ್ ಕೊರೆಯುವ ಮೂಲಕ, ಪಂಪ್ ಅಳವಡಿಸುವ ಮೂಲಕ ಹಾಗೂ ವಿದ್ಯುತ್ ಸಂಪರ್ಕ ಒದಗಿಸುವ ಮೂಲಕ ಕೃಷಿಗೆ ಅಗತ್ಯವಿರುವ ನೀರನ್ನು ಸರಬರಾಜು ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಯೋಜನೆಯ ಉದ್ದೇಶ :
ಗ್ರಾಮೀಣ ಪ್ರದೇಶಗಳಲ್ಲಿ ನೆಲೆಯೂರಿರುವ ರೈತರಿಗೆ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಈ ಯೋಜನೆ ರೂಪಿತವಾಗಿದೆ. ಬೋರ್ವೆಲ್, ಪಂಪ್ಸಟ್ ಮತ್ತು ವಿದ್ಯುತ್ ಸಂಪರ್ಕ ಸೇರಿದಂತೆ ಸಂಪೂರ್ಣ ಪ್ಯಾಕೇಜ್ನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ.
ಪ್ರಮುಖ ವಿಶೇಷತೆಗಳು.
1.ಸಂಪೂರ್ಣ ಸಬ್ಸಿಡಿ ಯೋಜನೆ: ರೈತರಿಂದ ಯಾವುದೇ ಮೊತ್ತವನ್ನು ಕಳೆದುಕೊಳ್ಳದೆ ಸರ್ಕಾರವೇ ಸಂಪೂರ್ಣ ವೆಚ್ಚ ವಹಿಸುತ್ತದೆ.
2.ವೈಯಕ್ತಿಕ ಹಾಗೂ ಸಾಮೂಹಿಕ ಯೋಜನೆಗಳು ಲಭ್ಯ: ವೈಯಕ್ತಿಕವಾಗಿ 1-2 ಎಕರೆ ಹೊಂದಿರುವ ರೈತರಿಗೂ ಹಾಗೂ 8 ಎಕರೆಗೂ ಹೆಚ್ಚು ಹೊಂದಿರುವ ಗುಂಪು ರೈತರಿಗೆ ಸಹ ಅನ್ವಯ.
3.ಪಂಪ್ ಹಾಗೂ ವಿದ್ಯುತ್ ಸಂಪರ್ಕ ಸಹಿತ ಬೋರ್ವೆಲ್: ಬೋರ್ವೆಲ್ ಕೇವಲ ಕೊರೆಯುವುದು ಮಾತ್ರವಲ್ಲದೆ, ಪಂಪ್ ಮೋಟರ್ ಅಳವಡಿಕೆ ಹಾಗೂ ವಿದ್ಯುತ್ ಸಂಪರ್ಕವನ್ನೂ ಒದಗಿಸಲಾಗುತ್ತದೆ.
ಸ್ಥಳಾನುಸಾರ ನೆರವು ಮೊತ್ತ.
– ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು: ₹3.75 ಲಕ್ಷ
– ಇತರ ಜಿಲ್ಲೆಗಳು: ₹2.25 ಲಕ್ಷ.
ಅರ್ಹತ ಮನದಂಡಗಳು :
– ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
– ಅಲ್ಪಸಂಖ್ಯಾತ ಸಮುದಾಯದ ಸದಸ್ಯರಾಗಿರಬೇಕು
– ಕನಿಷ್ಠ 1 ಅಥವಾ 2 ಎಕರೆ ಭೂಮಿ ಹೊಂದಿರಬೇಕು (ಜಿಲ್ಲೆಗನುಸಾರ)
– ಬ್ಯಾಂಕ್ ಖಾತೆ, ಭೂಮಿಯ ದಾಖಲೆಗಳು, ವಿಳಾಸ ಪುರಾವೆ, ಫೋಟೋ ಅಗತ್ಯ.
ಅರ್ಜಿ ಸಲ್ಲಿಸುವ ವಿಧಾನ :
1. ಆನ್ಲೈನ್ ಅಥವಾ ನೇರವಾಗಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದು.
2. ಅರ್ಜಿ ಜೊತೆ ಅಗತ್ಯ ದಾಖಲೆಗಳು ಸಲ್ಲಿಸಬೇಕು:
– ಭೂಮಿಯ ದಾಖಲೆಗಳು
– ಸ್ವಯಂ ಘೋಷಣಾ ಪತ್ರ
– ಬ್ಯಾಂಕ್ ಪಾಸ್ಬುಕ್ ಪ್ರತಿಯು
– ಬಾಡಿಗೆದಾರರ ಪ್ರಮಾಣಪತ್ರ (ಅಗತ್ಯವಿದ್ದರೆ)
3. ಅರ್ಜಿ ಪರಿಶೀಲನೆಯ ನಂತರ ಆಯ್ಕೆಯಾದ ರೈತರಿಗೆ ಯೋಜನೆಯ ಅನುಷ್ಠಾನ ಮಾಡಲಾಗುತ್ತದೆ.
ಸಂಪರ್ಕ ವಿವರ :
ಕಚೇರಿ ವಿಳಾಸ :
ದೇವರಾಜ ಅರಸು ಭವನ, ನಂ.16/ಡಿ, 4ನೇ ಮಹಡಿ,ಮಿಲ್ಲರ್ಸ್ ಟ್ಯಾಂಕ್ ಬಂಡ್ ಏರಿಯಾ, ವಸಂತನಗರ, ಬೆಂಗಳೂರು – 560052
ಇಮೇಲ್: [md.dbcdc@gmail.com](mailto:md.dbcdc@gmail.com)
ದೂರವಾಣಿ: 080-22374832ಸಹಾಯವಾಣಿ: +91 709040100 / +91 709040900
ಆಧಿಕೃತ ವೆಬ್ಸೈಟ್ : [dbcdc.karnataka.gov.in](https://dbcdc.karnataka.gov.in).
ಸಾರಾಂಶ :
ಗಂಗಾ ಕಲ್ಯಾಣ ಯೋಜನೆ ರೈತರ ಕೃಷಿಯಲ್ಲಿ ನೀರಾವರಿ ಸಮಸ್ಯೆ ನಿವಾರಣೆಗೆ ದಿಟ್ಟ ಹೆಜ್ಜೆ. ಕೃಷಿ ಉತ್ಪಾದನೆ ಹೆಚ್ಚಿಸಲು, ಕೃಷಿ ಖರ್ಚು ಕಡಿಮೆ ಮಾಡಲು ಮತ್ತು ರೈತರ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಲು ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ.