ಇಂದಿರಾ ಗಾಂಧಿ ಅಣು ಸಂಶೋಧನಾ ಕೇಂದ್ರವು 337 ಹುದ್ದೆಗಳಿಗೆ ನೇಮಕಕ್ಕೆ ಅಧಿಸೂಚನೆ ಬಿಡುಗಡೆ ಮಾಡಿದೆ. ಹಾಗೂ ಅರ್ಜಿಸಲ್ಲಿಸಲು ಮೇ 14 ರವರೆಗೆ ಕೊನೆ ದಿನ ಎಂದು ತಿಳಿಸಲಾಗಿತ್ತು. ಆದರೆ ದೇಶದಾದ್ಯಂತ ಲಾಕ್‌ಡೌನ್ ನಿರ್ಬಂಧದ ಹಿನ್ನೆಲೆಯಲ್ಲಿ ನಿರುದ್ಯೋಗಿಗಳಿಗೆ ಅನುಕೂಲವಾಗಲೆಂದು ಪ್ರಸ್ತುತ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಿ ಪ್ರಕಟಣೆ ಹೊರಡಿಸಿದೆ. ಶಿಕ್ಷಣ ಅರ್ಹತಾ ವಿವರಗಳು, ಅಗತ್ಯವಿರುವ ವಯಸ್ಸಿನ ಮಿತಿ, ಆಯ್ಕೆಯ ವಿಧಾನ, ಶುಲ್ಕ ವಿವರಗಳು ಮತ್ತು ಹೇಗೆ ಅರ್ಜಿಸಲ್ಲಿಸಬೇಕು ಎಂಬಂತಹ ಇತರ ವಿವರಗಳನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ :
ಸೈಂಟಿಫಿಕ್ ಆಫೀಸರ್ 4
ಟೆಕ್ನಿಕಲ್ ಆಫೀಸರ್ 42
ಟೆಕ್ನೀಷಿಯನ್ ಬಿ 1
ಸ್ಟೆನೋಗ್ರಾಫರ್ ಗ್ರೇಡ್- 34
ಅಪ್ಪರ್ ಡಿವಿಷನ್ ಕ್ಲರ್ಕ್ 8
ಚಾಲಕ 2
ಸೆಕ್ಯೂರಿಟಿ ಗಾರ್ಡ್ 2
ವರ್ಕ್ ಅಸಿಸ್ಟಂಟ್ / ಎ 20
ಕ್ಯಾಂಟೀನ್ ಅಟೆಂಡಂಟ್ 15
ಸ್ಟೈಪೆಂಡರಿ ಟ್ರೇನಿ ಕೆಟಗರಿ-1 68
ಸ್ಟೈಪೆಂಡರಿ ಟ್ರೇನಿ ಕೆಟಗರಿ-2 171
ವಿದ್ಯಾರ್ಹತೆ :
ಮೇಲಿನ ಸದರಿ ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಬಿ.ಟೆಕ್ / ಎಂ.ಎಸ್ಸಿ / ಬಿಇ / ಡಿಪ್ಲೊಮ / ಎಸ್‌ಎಸ್‌ಸಿ / ಹೆಚ್‌ಎಸ್‌ಸಿ / ಐಟಿಐ ಉತ್ತೀರ್ಣರಾಗಿರಬೇಕು. ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
ವಯೋಮಿತಿ: ಆಯಾ ಹುದ್ದೆಗಳಿಗನುಗುಣವಾಗಿ ವಯೋಮಿತಿ ನಿಗದಿಪಡಿಸಲಾಗಿದೆ, ಇದರ ಕುರಿತಾದ ಹೆಚ್ಚಿನ ಮಾಹಿತಿ ಅಧಿಸೂಚನೆಯಲ್ಲಿ ಓದಿ ತಿಳಿದುಕೊಳ್ಳಬಹುದು.
ಅರ್ಜಿ ಶುಲ್ಕ :
ಸೈಂಟಿಫಿಕ್ ಆಫೀಸರ್, ಇ.ಡಿ ಟೆಕ್ನಿಕಲ್ ಆಫೀಸರ್, ಸಿಇ ಹುದ್ದೆಗಳಿಗೆ ರೂ.300.
ಸ್ಟೈಪೆಂಡರಿ ಟ್ರೇನಿ ಕೆಟಗರಿ-1 ಹುದ್ದೆಗೆ ರೂ.200.
ಸ್ಟೈಪೆಂಡರಿ ಟ್ರೇನಿ ಕೆಟಗರಿ-2, ಟೆಕ್ನೀಷಿಯನ್ ಬಿ, ಸ್ಟೆನೊ, ಸೆಕ್ಯೂರಿಟಿ ಗಾರ್ಡ್, ವರ್ಕ್ ಅಸಿಸ್ಟಂಟ್, ಕ್ಯಾಂಟೀನ್ ಅಟೆಂಡಂಟ್ ಹುದ್ದೆಗೆ ರೂ.100.
ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ ಒಳಪಡಿಸಿ ಆಯ್ಕೆ ಮಾಡಲಾಗುತ್ತದೆ, ಪರೀಕ್ಷೆಯು ವಸ್ತುನಿಷ್ಠ ಬಹುಆಯ್ಕೆ ಮಾದರಿಯಲ್ಲಿ ಇರಲಿದೆ, ಇದರ ಕುರಿತಾದ ಸಂಪೂರ್ಣ ಮಾಹಿತಿ ಅಧಿಸೂಚನೆಯಲ್ಲಿ ಓದಿ ತಿಳಿದುಕೊಳ್ಳಿ.
ಪ್ರಮುಖ ಸೂಚನೆಗಳು :
• ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿರುವ ಸೂಚನೆಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಲು ಸೂಚಿಸಲಾಗುತ್ತದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 15-04-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 30-06-2021