ಕೇಂದ್ರ ಆಹಾರ ಇಲಾಖೆಯಿಂದ ನೇಮಕಾತಿ ಅಧಿಸೂಚನೆ 2021 | Recruitment Notification 2021 from Central Food Department

ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 15 ಮೇ 2021 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಶಿಕ್ಷಣ ಅರ್ಹತಾ ವಿವರಗಳು, ಅಗತ್ಯವಿರುವ ವಯಸ್ಸಿನ ಮಿತಿ, ಆಯ್ಕೆಯ ವಿಧಾನ, ಶುಲ್ಕ ವಿವರಗಳು ಮತ್ತು ಹೇಗೆ ಅರ್ಜಿಸಲ್ಲಿಸಬೇಕು ಎಂಬಂತಹ ಇತರ ವಿವರಗಳನ್ನು ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ :

– ಪ್ರಿನ್ಸಿಪಾಲ್‌ ಮ್ಯಾನೇಜರ್ 01 ಹುದ್ದೆ
– ಜಾಯಿಂಟ್ ಡೈರೆಕ್ಟರ್ 12 ಹುದ್ದೆ
– ಸೀನಿಯರ್ ಮ್ಯಾನೇಜರ್ 01 ಹುದ್ದೆ
– ಸೀನಿಯರ್ ಮ್ಯಾನೇಜರ್ (ಐಟಿ) 01 ಹುದ್ದೆ
– ಡೆಪ್ಯೂಟಿ ಡೈರೆಕ್ಟರ್ 17 ಹುದ್ದೆ
– ಮ್ಯಾನೇಜರ್ 06 ಹುದ್ದೆ

ಒಟ್ಟು ಹುದ್ದೆಗಳು : 38

ವಿದ್ಯಾರ್ಹತೆ :

ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ವಿವಿಧ ವಿಭಾಗದಲ್ಲಿ ಅಂಗೀಕೃತ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸಬೇಕು.

ವಯೋಮಿತಿ :

ಡೆಪ್ಯೂಟಿ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು. ಇತರೆ ಎಲ್ಲ ಹುದ್ದೆಗಳಿಗೆ ಗರಿಷ್ಠ 50 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.

ವೇತನಶ್ರೇಣಿ :

ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು 40,000 ರಿಂದ 80,000 ವರೆಗೆ ವೇತನ ಪಡೆಯಲಿದ್ದಾರೆ.

ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.

ಪ್ರಮುಖ ಸೂಚನೆಗಳು :

• ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿರುವ ಸೂಚನೆಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಲು ಸೂಚಿಸಲಾಗುತ್ತದೆ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16 ಎಪ್ರಿಲ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಮೇ 2021

Leave a Reply