ದಕ್ಷಿಣ ರೈಲ್ವೆ ನೇಮಕಾತಿ – 3378 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

ದಕ್ಷಿಣ ರೈಲ್ವೆಯು ವಿವಿಧ ಅಪ್ರೆಂಟಿಸ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಆನ್‌ಲೈನ್‌ ಅರ್ಜಿ ಸಲ್ಲಿಸಲು ಜೂನ್‌ 30, 2021 ರವರೆಗೆ ಅವಕಾಶ ಇರುತ್ತದೆ. ಒಟ್ಟು 3378 ಅಪ್ರೆಂಟಿಸ್ ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ. ಶಿಕ್ಷಣ ಅರ್ಹತಾ ವಿವರಗಳು, ಅಗತ್ಯವಿರುವ ವಯಸ್ಸಿನ ಮಿತಿ, ಆಯ್ಕೆಯ ವಿಧಾನ, ಶುಲ್ಕ ವಿವರಗಳು ಮತ್ತು ಹೇಗೆ ಅರ್ಜಿಸಲ್ಲಿಸಬೇಕು ಎಂಬಂತಹ ಇತರ ವಿವರಗಳನ್ನು ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ :
ಕ್ಯಾರಿಯೇಜ್ ವರ್ಕ್ಸ್‌, ಪೆರಂಬೂರ್ 936
ಗೋಲ್ಡೆನ್‌ರಾಕ್‌ ವರ್ಕ್ಸ್‌ಶಾಪ್‌ 756
ಸಿಗ್ನಲ್ ಮತ್ತು ಟೆಲಿಕಾಮ್‌ ವರ್ಕ್‌ಶಾಪ್‌, ಪೊಡನುರ್ 1686
ಒಟ್ಟು ಹುದ್ದೆಗಳು: 3378

ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ / ಐಟಿಐ / ಡಿಪ್ಲೊಮ ಪಾಸ್‌.

ವಯೋಮಿತಿ ಅರ್ಹತೆಗಳು: ಕನಿಷ್ಠ 15 ವರ್ಷ ಪೂರೈಸಿರುವ, ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ  ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಶುಲ್ಕ :
ರೂ.100 ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿಸಬೇಕು.

ಪ್ರಮುಖ ಸೂಚನೆಗಳು :

•  ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿರುವ ಸೂಚನೆಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಲು ಸೂಚಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 30-06-2021

ವೆಬ್ಸೈಟ್

ಅಧಿಸೂಚನೆ 1

ಅಧಿಸೂಚನೆ 2

ಅಧಿಸೂಚನೆ 3

Leave a Reply