ಗಡಿ ರಸ್ತೆಗಳ ಸಂಸ್ಥೆ (BRO ) 2023 ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ – 567 ಬಹು ನುರಿತ ಕೆಲಸಗಾರ ( Multi Skilled Worker ) ಹುದ್ದೆಗಳಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ |  ಆಫ್ ಲೈನ್ ಮುಖಾಂತರ ಅರ್ಜಿಗಳನ್ನು ಸ್ವೀಕರಿಸಲಾಗುವುದು.

0
20230105 113200 0000 min

ಗಡಿ ರಸ್ತೆಗಳ ಸಂಸ್ಥೆ ( BRO) ಇತ್ತೀಚೆಗೆ ಬಹು ನುರಿತ ಕೆಲಸಗಾರರ ( Multi skilled Workers )ಹುದ್ದೆಗೆ ಅಧಿಕೃತವಾಗಿ ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿ ಆಸಕ್ತ ಅಭ್ಯರ್ಥಿಗಳು 13 ಫೆಬ್ರವರಿ 2023 ರ ಮೊದಲು ಅರ್ಜಿ ಸಲ್ಲಿಸಬಹುದು. ವಿವರವಾದ ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆಯ ವಿವರವನ್ನು ನಮ್ಮ ಇಂದಿನ ಬ್ಲಾಗ್ ಮೂಲಕ ನೀವು ತಿಳಿದುಕೊಳ್ಳಬಹುದು.

ಸಂಸ್ಥೆ : ಗಡಿ ರಸ್ತೆಗಳ ಸಂಸ್ಥೆ (BRO)

ಪ್ರಮುಖ ವಿವರಗಳು :

ವಿಧ :ಕೇಂದ್ರ ಸರ್ಕಾರ ನೌಕರಿಗಳು
ಹುದ್ದೆಯ ಹೆಸರು :ಬಹು ನುರಿತ ಕೆಲಸಗಾರ
ಒಟ್ಟು ಖಾಲಿ ಹುದ್ದೆಗಳು :567
ಸ್ಥಳ :ಭಾರತದಾದ್ಯಂತ
ಅರ್ಜಿ ಸಲ್ಲಿಸುವ ವಿಧಾನ :ಆಫ್ ಲೈನ್

ಖಾಲಿ ಹುದ್ದೆಗಳ ವಿವರಗಳು :

  1. ಆಕಾಶವಾಣಿ ಕುಶಲ ಕೆಲಸಗಾರ ( Radio Mechanic ) -02
  2. ನಿರ್ವಾಹಕ ಸಂವಹನ ( Operator Communication ) -154
  3. ಯಾಂತ್ರಿಕ ಸಾರಿಗೆ ಚಾಲಕ ( Driver Mechanical Transport ) – 09
  4. ವಾಹನ ಯಾಂತ್ರಿಕಾರ ( Vehicle Mechanic ) – 236
  5. ಬಹು ನುರಿತ ಕೆಲಸಗಾರ ಕಲ್ಲು ಕೊರೆಯುವವರು ( Multi Skilled Worker) – 11
  6. ಬಹು ನುರಿತ ಕೆಲಸಗಾರ ಕಲ್ಲು ಕೆಲಸದವನು ( Multi Skilled Worker Mason) – 149
  7. ಬಹು ನುರಿತ ಕೆಲಸಗಾರ ವರ್ಣಚಿತ್ರಕಾರ ( Multi Skilled Worker Painter ) – 05
  8. ಬಹು ನುರಿತ ಕೆಲಸಗಾರ ಹೋಟೆಲ್ ಮಾಣಿ ( Multi Skilled Worker Mess Waiter ) – 01

ಶೈಕ್ಷಣಿಕ ಅರ್ಹತೆ :

  • ಎಲ್ಲಾ ಇತರ ಪೋಸ್ಟ್‌ಗಳು: ಅಭ್ಯರ್ಥಿಗಳು 10ನೇ, ITI ಅಥವಾ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ತತ್ಸಮಾನವನ್ನು ಉತ್ತೀರ್ಣರಾಗಿರಬೇಕು.
  • ಯಾಂತ್ರಿಕ ಸಾರಿಗೆ ಚಾಲಕ: ಅಭ್ಯರ್ಥಿಗಳು 10ನೇ, ಘನ ವಾಹನ ಚಾಲನಾ ( Heavy Vehicle Driving License) ಪರವಾನಗಿ ಅಥವಾ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ತತ್ಸಮಾನವನ್ನು ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ :

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು: 25 – 27 ವರ್ಷಗಳು

ವೇತನ ಶ್ರೇಣಿಯ ವಿವರಗಳು :

  • ಆಕಾಶವಾಣಿ ಕುಶಲ ಕೆಲಸಗಾರ ( Radio Mechanic ) – Rs. 25,500 – 81,100/-
  • ನಿರ್ವಾಹಕ ಸಂವಹನ ( Operator Communication )– Rs. 19,900 – 63,200/-
  • ಯಾಂತ್ರಿಕ ಸಾರಿಗೆ ಚಾಲಕ ( Driver Mechanical Transport (OG) ) – Rs. 19,900 – 63,200/
  • ವಾಹನ ಯಾಂತ್ರಿಕಾರ ( Vehicle Mechanic ) – Rs. 19,900 – 63,200/-
  • ಬಹು ನುರಿತ ಕೆಲಸಗಾರ ಕಲ್ಲು ಕೊರೆಯುವವರು ( MSW Driller ) – Rs. 18,000 – 56,900/-
  • ಬಹು ನುರಿತ ಕೆಲಸಗಾರ ಕಲ್ಲು ಕುಟ್ಟುವವನು ( MSW Mason) – Rs. 18,000 – 56,900/-
  • ಬಹು ನುರಿತ ಕೆಲಸಗಾರ ವರ್ಣ ಚಿತ್ರಗಾರ ( MSW Painter ) – Rs. 18,000 – 56,900/-
  • ಬಹು ನುರಿತ ಕೆಲಸಗಾರ ಹೋಟೆಲ್ ಮಾಣಿ ( MSW Mess Waiter ) – Rs. 18,000 – 56,900/-

ಅರ್ಜಿ ಶುಲ್ಕ :

  • ಸಾಮನ್ಯ ವರ್ಗ ( General Category ) / ಇತರ ಹಿಂದುಳಿದ ವರ್ಗ ( OBC ) / ಆರ್ಥಿಕವಾಗಿ ಹಿಂದುಳಿದ ವರ್ಗ ( EWS ) ಅಭ್ಯರ್ಥಿಗಳಿಗೆ – Rs. 50/-
  • ಪರಿಶಿಷ್ಟ ಜಾತಿ (SC) / ಪರಿಶಿಷ್ಟ ಪಂಗಡಗಳು (ST) / ಮಾನದಂಡ ವಿಕಲಾಂಗ ವ್ಯಕ್ತಿಗಳು (PWBD) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ಪ್ರಕ್ರಿಯೆ :

  1. ಲಿಖಿತ ಪರೀಕ್ಷೆ ( Written Test)
  2. ದೈಹಿಕ ದಕ್ಷತೆಯ ಪರೀಕ್ಷೆ ( Physical Efficiency Test )
  3. ಪ್ರಾಯೋಗಿಕ / ವ್ಯಾಪಾರ ಪರೀಕ್ಷೆ ( Practical / Trade Test )
  4. ವೈದ್ಯಕೀಯ ಮಾನದಂಡಗಳ ಪರೀಕ್ಷೆ ( Medical Standards Test)

ಅರ್ಜಿ ಸಲ್ಲಿಸುವುದು ಹೇಗೆ :

  • ಅಧಿಕೃತ ವೆಬ್‌ಸೈಟ್ www.bro.gov.in ಗೆ ಭೇಟಿ ನೀಡಿ
  • BRO ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ಪರಿಶೀಲಿಸಿ.
  • ಕೆಳಗಿನ ನೀಡಲಾದ ಲಿಂಕ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
  • ಅಗತ್ಯ ದಾಖಲೆಗಳ ಫೋಟೋಕಾಪಿಗಳನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಿ.

ವಿಳಾಸ :

“Commandant BRO School & Centre, Dighi camp, Pune- 411 015.”

ಪ್ರಮುಖ ಸೂಚನೆಗಳು:

ಅರ್ಜಿದಾರರು ತಮ್ಮ ಶೈಕ್ಷಣಿಕ ಪ್ರಮಾಣಪತ್ರಗಳು, CV ಮತ್ತು ID ಪುರಾವೆಗಳ ದೃಢೀಕರಿಸಿದ ಫೋಟೋಕಾಪಿಗಳನ್ನು ಲಗತ್ತಿಸಬೇಕಾಗಿದೆ (ಅಗತ್ಯವಿದ್ದರೆ, ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ದಾಖಲೆಗಳ ಬಗ್ಗೆ ಪರಿಶೀಲಿಸಿ )

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :02.01.2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :13.02.2023

Leave a Reply

You may have missed