ಪಡಿತರ ಚೀಟಿ ಹೊಂದಿರುವ ಜನರಿಗೆ ಸರ್ಕಾರದಿಂದ ಸಿಗಲಿದೆ ಇನ್ನಷ್ಟು ಪ್ರಯೋಜನೆಗಳು. ಇಲ್ಲಿದೆ ಸಂಪೂರ್ಣ ಮಾಹಿತಿ ;
ನಾವು ಈ ದೇಶದ ನಿವಾಸಿ ಎಂದು ಗುರುತಿಸಲು ಕೆಲವು ದಾಖಲೆಗಳು ಕಡ್ಡಾಯವಾಗಿ ಇರಬೇಕು. ಆಧಾರ್ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ವೋಟರ್ ಐಡಿ ಹಾಗು ಡ್ರೈವಿಂಗ್ ಲೈಸೆನ್ಸ್ ಇದೇ ರೀತಿ ಅನೇಕ ದಾಖಲೆಗಳು ಇರುವುದು ಅತ್ಯವಶ್ಯಕವಾಗಿದೆ. ಇವುಗಳ ಜೊತೆಗೆ ಪಡಿತರ ಚೀಟಿಯು ಸಹ ಒಂದು ಮುಖ್ಯವಾದ ದಾಖಲೆ ಆಗಿದೆ.
ಈ ಪಡಿತರ ಚೀಟಿಯನ್ನು ಬಿಪಿಎಲ್ ಹಾಗು ಎಪಿಎಲ್ ಕಾರ್ಡ್ ಆಗಿ ವಿಂಗಡಿಸಲಾಗಿದೆ. ಯಾವುದೆ ರೀತಿಯ ಪಡಿತರ ಚೀಟಿ ಆಗಲಿ ಇದೀಗ ಕೇವಲ ಗುರುತಿನ ದಾಖಲೆಯಾಗಿ ಉಳಿದಿಲ್ಲ.
ಇದೀಗ ರಾಜ್ಯ ಹಾಗು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅನೇಕ ಯೋಜನೆಗಳಿಗೆ ಮಾನದಂಡವಾಗಿದೆ. ಅದಲ್ಲದೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಜನರು ಅನೇಕ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗು ಬಿಪಿಎಲ್ ಪಡಿತರ ಚೀಟಿ ಹೊಂದಿರುವುದು ಬಹಳ ಮುಖ್ಯವಾಗಿದೆ.
ಇದೀಗ ಪಡಿತರ ಚೀಟಿಯಿಂದ ಆರೋಗ್ಯ ಸೇವೆಗಳನ್ನು ಪಡೆಯಲು ಸಹ ಬಳಸಲಾಗುತ್ತದೆ. ಅದಲ್ಲದೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆಯುಷ್ಮಾನ್ ಯೋಜನೆಗೂ ಸಹ ಪಡಿತರ ಚೀಟಿಯು ಒಂದು ಮುಖ್ಯವಾದ ದಾಖಲೆಯಾಗಿ ಪರಿಗಣಿಸಲಾಗಿದೆ.
ಈ ಆಯ್ಯುಷ್ಮಾನ್ ಆರೋಗ್ಯ ಕಾರ್ಡ್ ಜೊತೆಗೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪ್ರಜೆಗಳಿಗೆ ಆಸ್ಪತ್ರೆಗಳಲ್ಲಿ 5 ಲಕ್ಷ ರೂಗಳ ವರೆಗೂ ಉಚಿತ ಚಿಕಿತ್ಸೆಯನ್ನು ಪಡೆಯಬಹುದು. ಎಪಿಎಲ್ ಪಡಿತರ ಚೀಟಿ ಹೊಂದಿರುವ ಜನರು 2 ಲಕ್ಷ ರೂಗಳ ವರೆಗೂ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.
ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೇ ಸರ್ಕಾರ ಗುರುತಿಸಿರುವ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಚಿಕಿತ್ಸೆಯನ್ನು ಪಡೆಯಬಹುದು. ಈ ಯೋಜನೆ ಜಾರಿಗೊಳಿಸಿರುವುದರಿಂದ ಬಡವರು ಸಹ ಉತ್ತಮ ಗುಣಮಟ್ಟವಾದ ಚಿಕಿತ್ಸೆಯನ್ನು ಪಡೆಯಲು ಸಹಕಾರಿಯಾಗಿದೆ. ಇದೀಗ ಜನರು ಅನಾರೋಗ್ಯ ಉಂಟಾಗಿದೆ, ತಮ್ಮ ಬಳಿ ಹಣವಿಲ್ಲ ಹಾಗು ಹೇಗೆ ಚಿಕಿತ್ಸೆ ಪಡೆಯುವುದು ಎಂದು ಚಿಂತಿಸುವ ಅವಶ್ಯಕತೆ ಇಲ್ಲ. ನಿಮ್ಮ ಆರೋಗ್ಯ ಸೇವೆಗಳ ಚಿಕಿತ್ಸೆಯನ್ನು ಸರ್ಕಾರವೇ ಭರಿಸುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ ;
- ಮೊದಲು ಆರೋಗ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ನಂತರ ಇದಕ್ಕೆ ಸಂಬಂಧ ಪಟ್ಟ ಪುಟ ತೆರೆಯುತ್ತದೆ, ಅಲ್ಲಿ ಕಾರ್ಡ್ ಅನ್ನೋ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ಸಂಖ್ಯೆ ಹಾಕಿ ಅದಕ್ಕೆ ಬರುವ ಒಟಿಪಿ ಅನ್ನು ನಮೂದಿಸಬೇಕು.
- ನಂತರ ಅರ್ಜಿ ನಮೂನೆಯಲ್ಲಿ ಇರುವ ಎಲ್ಲಾ ವಿವರಗಳನ್ನು ಸರಿಯಾಗಿ ಓಧಿ ಭರ್ತಿ ಮಾಡಬೇಕು.
- ಅಗತ್ಯ ಇರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ