3 ಲಕ್ಷ ಹೂಡಿಕೆ ಮಾಡಿ ತಿಂಗಳಿಗೆ 30,000/- ರೂ ಬಡ್ಡಿ ಹಣವನ್ನು ಪಡೆಯಿರಿ. ಇಲ್ಲಿದೆ ಸಂಪೂರ್ಣ ಮಾಹಿತಿ;
ಆರಂಭದಿಂದಲೇ ಹೂಡಿಕೆ ಮಾಡಿ ಮುಂದೆ ಬರುವ ದಿನಗಳಲ್ಲಿ ಒಂದು ರೂಪಾಯಿ ದುಡಿಮೆ ಇಲ್ಲದೆ ನೀವು ಹೂಡಿಕೆ ಮಾಡಿರುವ ಹಣದಿಂದ ತಿಂಗಳಿಗೆ 30,000/- ರೂಗಳ ವರೆಗೆ ಬಡ್ಡಿಯನ್ನು ಪಡೆಯಬಹುದು.
ಈಗೀನ ಕಾಲದಲ್ಲಿ ನಮ್ಮ ದುಡಿಮೆಯಲ್ಲಿ ಸ್ವಲ್ಪ ಹಣವನ್ನು ಹೂಡಿಕೆ ಮಾಡುವುದು ಅಥವಾ ಉಳಿತಾಯ ಮಾಡುವುದು ಬಹಳ ಮುಖ್ಯವಾಗಿದೆ. ಯಾಕೆಂದರೆ ನಮ್ಮ ಭವಿಷ್ಯ ನಮ್ಮ ಕಣ್ಣ ಮುಂದೆಯೇ ಇರುತ್ತದೆ. ಈವಾಗ ನಾವು ಆರ್ಥಿಕವಾಗಿ ಕಷ್ಟ ಪಡುತ್ತಿದ್ದರೆ, ಭವಿಷ್ಯದಲ್ಲಿ ಚೆನ್ನಾಗಿ ಇರಬೇಕೆಂದರೆ ಹೂಡಿಕೆ ಅಥವಾ ಉಳಿತಾಯ ಮಾಡಲೆ ಬೇಕೆನ್ನುವ ಪರಿಸ್ಥಿತಿ ನಮ್ಮದಾಗಿದೆ.
ಎಲ್ಲರಿಗೂ ಒಂದೇ ಆದಾಯ ಬರುವುದು ಕಷ್ಟ ಕೆಲವರಿಗೆ ಜಾಸ್ತಿ ಆದಾಯ ಸಿಗುತ್ತದೆ ಇನ್ನು ಕೆಲವರಿಗೆ ಕಡಿಮೆ ಆದಾಯ ಸಿಗುತ್ತದೆ. ಅದಕ್ಕಾಗಿ ಕಡಿಮೆ ಆದಾಯ ಸಿಗುವರು ತಮ್ಮ ಖರ್ಚುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿ ಹಣ ಉಳಿತಾಯವನ್ನು ಮಾಡುವುದು ತುಂಬಾ ಒಳ್ಳೆಯದು. ಹಾಗಂತ ಹೂಡಿಕೆ ಮಾಡಲು ನಮ್ಮ ಬಳಿ ಆದಾಯ ಇಲ್ಲವೆಂದು ಕೊಂಡರೆ ಮುಂದೆ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಯಾಕೆಂದರೆ ಯಾರು ಸಹ ಕಷ್ಟ ಅಂದಾಗ ಸಹಾಯ ಮಾಡಲ್ಲ, ಸುಮ್ಮನೆ ಹಣವನ್ನು ಕೂಡ ಕೊಡುವುದಿಲ್ಲ. ನಮಗೆ ಅಗತ್ಯ ಇರುವ ಹಣವನ್ನು ನಾವೇ ದುಡಿದು ಸಂಪಾದಿಸ ಬೇಕು.
ಹೂಡಿಕೆಯನ್ನು ಮಾಡಬೇಕು ಎಂದ ತಕ್ಷಣವೇ ನಿಮ್ಮ ಹತ್ತಿರ ಲಕ್ಷಾಂತರ ರೂಪಾಯಿ ಹಣ ಇರಬೇಕು ಎಂದಲ್ಲ. ಎಷ್ಟೇ ಚಿಕ್ಕ ಮೊತ್ತದ ಹಣ ಇದ್ದರೂ ಸಹ ಅದನ್ನು ಉಳಿತಾಯ ಮಾಡುವುದು ಬಹಳ ಮುಖ್ಯವಾಗಿದೆ. ನಮ್ಮ ಹೂಡಿಕೆ ಹಾಗು ಉಳಿತಾಯದ ಹಣವನ್ನು ನೀಡುವಂತಹ ಮರ ಆಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಸಾಮನ್ಯವಾಗಿ ಎಲ್ಲರಿಗೂ ಎಲ್ಲಿ ಸುರಕ್ಷಿತ ಹೂಡಿಕೆ ಮಾಡಬೇಕು ಎನ್ನುವ ಪ್ರಶ್ನೆ ಬರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು. ಇಲ್ಲಿದೆ ಸಂಪೂರ್ಣ ಮಾಹಿತಿ ;
ಇತ್ತೀಚೆಗೆ ಮ್ಯೂಚುವಲ್ ಫಂಡ್ ಎನ್ನುವುದು ತುಂಬಾ ಪ್ರಚಲಿತದಲ್ಲಿದೆ ಹಾಗೆ ಪ್ರಸಿದ್ದಿಯನ್ನು ಸಹ ಪಡೆದಿದೆ. ಯಾಕೆಂದರೆ ಇದರಲ್ಲಿ ಹೂಡಿಕೆ ಮಾಡಿದರೆ 15 ರಿಂದ 20 ಪರ್ಸೆಂಟ್ ವರೆಗೂ ಬಡ್ಡಿಯನ್ನು ಪಡೆಯಬಹುದು. ಇದರಲ್ಲಿ ನೀವೇನಾದರೂ ಧೀರ್ಘ ಕಾಲಕ್ಕೆ ಹೂಡಿಕೆಯನ್ನು ಮಾಡಿದರೆ ನೀವು ನಿಮ್ಮ ಕೆಲಸದಿಂದ ನಿವೃತ್ತಿಯನ್ನು ಪಡೆದ ಬಳಿಕ ನೀವು ಕುಳಿತ ಜಾಗದಲ್ಲಿಯೇ ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಬರುವ ಹಾಗೆ ಮಾಡಿಕೊಳ್ಳಬಹುದಾಗಿದೆ.
ಮ್ಯೂಚುವಲ್ ಫಂಡ್ ನಲ್ಲಿ 3 ಲಕ್ಷ ರೂಗಳ ಹೂಡಿಕೆಯನ್ನು ಮಾಡಿ. ಇಲ್ಲಿದೆ ಸಂಪೂರ್ಣ ಮಾಹಿತಿ ;
ನೀವೇನಾದರೂ ನಿಮ್ಮ 25 ನೇ ವರ್ಷದಿಂದ ಹೂಡಿಕೆಯನ್ನು ಮಾಡಲು ಪ್ರಾರಂಭಿಸಿದರೆ ಮುಂದಿನ 25 ವರ್ಷದಲ್ಲಿ ನಿಮ್ಮ ಕೈಯಲ್ಲಿ ತುಂಬಾ ದೊಡ್ಡ ಮೊತ್ತದಲ್ಲಿ ಹಣವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.
ನೀವು ಪ್ರತಿ ತಿಂಗಳ 30,000/- ರೂಗಳನ್ನು ಪಡೆಯಲು 20 ವರ್ಷಗಳ ತನಕ ನಿರಂತರವಾಗಿ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ನೀವು ಹೂಡಿಕೆಯ ಯೋಜನೆಯನ್ನು ಮಾಡಬೇಕಾಗುತ್ತದೆ. ಇದೀಗ ಮ್ಯೂಚುವಲ್ ಫಂಡ್ ಅಲ್ಲಿ 12 ರಿಂದ 15 ಪರ್ಸೆಂಟ್ ಅಷ್ಟೇ ಅಲ್ಲದೆ ಕೆಲವು ಹೂಡಿಕೆಯ ಯೋಜನೆಯಲ್ಲಿ 20 ಪರ್ಸೆಂಟ್ ತನಕ ವಾರ್ಷಿಕ ಲಾಭವನ್ನು ಪಡೆಯಬಹುದು.
ಒಂದು ಲೆಕ್ಕಾಚಾರದಲ್ಲಿ ನೋಡುವುದಾದರೆ ಇಪ್ಪತೈದನೆ ವರ್ಷದ ವ್ಯಕ್ತಿ 25 ವರ್ಷಗಳ ಕಾಲ ಹೂಡಿಕೆಯನ್ನು ಮಾಡಿದರೆ ಆತನ ಬಳಿ ಒಟ್ಟಾಗಿ 49 ಲಕ್ಷ ರೂ ಸಂಗ್ರಹವಾಗುತ್ತದೆ. ವರ್ಷಕ್ಕೆ 15% ಬಡ್ಡಿ ದರದ ಹಾಗೆ ಮೂರು ಲಕ್ಷ ಎಪ್ಪತ್ತೆರಡು ಸಾವಿರ ರೂಗಳನ್ನು ಹಿಂಪಡಿಯಬಹುದಾಗಿದೆ. ಅಂದರೆ 30,000/- ರೂಗಳ ಬಡ್ಡಿ ಹಣವನ್ನು ಪ್ರತಿ ತಿಂಗಳು ಪಡೆಯಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಆಗುತ್ತಿರುವ ಅಪಾಯಗಳನ್ನು ಹೊರತುಪಡಿಸಿ ಮ್ಯೂಚುವಲ್ ಫಂಡ್ ಹೂಡಿಕೆಯು ಉತ್ತಮವಾದ ಲಾಭವನ್ನು ನೀಡುತ್ತದೆ. ಹಾಗಾಗಿ ನೀವು ಸಹ ಲಾಭ ನಷ್ಟಗಳ ಲೆಕ್ಕಾಚಾರ ಹಾಕಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆಯನ್ನು ಮಾಡಲು ಪ್ರಾರಂಭಿಸಿ.