NSP ವಿದ್ಯಾರ್ಥಿವೇತನಕ್ಕೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಇಂದೇ ಅರ್ಜಿ ಸಲ್ಲಿಸಿ.
ರಾಷ್ಟ್ರೀಯ ವಿದ್ಯಾರ್ಥಿವೇತನ ವೆಬ್‌ಸೈಟ್ [NSP] ಉಚಿತ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಾಲಾ ಹಂತದಲ್ಲಿ, ಕಾಲೇಜು ಹಂತದಲ್ಲಿ ಅಥವಾ ಪದವಿ ಹಂತದಲ್ಲಿ ವಿವಿಧ ರೀತಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ.
NSP ವಿದ್ಯಾರ್ಥಿವೇತನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ :
ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಅನೇಕ ಯೋಜನೆಯನ್ನು ಆರಂಭಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜು ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೆ ಈ ವೇತನವನ್ನು ಪಡೆಯಬಹುದಾಗಿದೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಉದ್ದೇಶದಿಂದ ಸರ್ಕಾರವು ಈ ವಿದ್ಯಾರ್ಥಿವೇತನಗಳನ್ನು ನೀಡುತ್ತಿದೆ.
ಪ್ರಧಾನಿ ಮಂತ್ರಿಯಾದ ನರೇಂದ್ರ ಮೋದಿಯವರು ಅನೇಕ ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಆಸಕ್ತಿಯನ್ನು ಹೆಚ್ಚಿಸಬೇಕೆಂದು ಹಾಗು ಅವರ ಶಿಕ್ಷಣದ ಜ್ಞಾನ ಹೆಚ್ಚಿಸಬೇಕೆಂದು ಈ ಯೋಜನೆಗಳನ್ನು ನಡೆಸಲಾಗುತ್ತಿದೆ. ಈ ವೇತನದಿಂದಾಗಿ ಅನೇಕ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಆಗುವ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಸಹಾಯವಾಗುತ್ತದೆ .
NSP ವಿದ್ಯಾರ್ಥಿವೇತನ ಪಡೆಯಲು ಇರಬೇಕಾದ ಅರ್ಹತೆಗಳ ಬಗ್ಗೆ ವಿವರ ಇಲ್ಲಿದೆ :
- ಭಾರತದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಸಹ ಈ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಎಲ್ಲಾ ಶಾಲಾ – ಕಾಲೇಜು ಹಾಗೂ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ರಾಷ್ಟ್ರೀಯ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಶಾಲಾ – ಕಾಲೇಜು ಹಂತದಲ್ಲಿ 60% ಕ್ಕಿಂತ ಹೆಚ್ಚಿನ ಅಂಕವನ್ನು ಪಡೆದಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನವನ್ನು ಪಡೆಯಬಹುದು .
- ವಿದ್ಯಾರ್ಥಿವೇತನ ದಲ್ಲಿ ಪ್ರಧಾನ ಮಂತ್ರಿ ವಿದ್ಯಾರ್ಥಿವೇತನ ಯೋಜನೆ , ಪ್ರಧಾನ ಮಂತ್ರಿ ಯಶಸ್ವಿ ಯೋಜನೆ , ಮೆಟ್ರಿಕ್ ವಿದ್ಯಾರ್ಥಿವೇತನ ಯೋಜನೆ , ಪ್ರಿ ಮೆಟ್ರಿಕ್ ವಿದ್ಯಾರ್ಥಿವೇತನ ಯೋಜನೆ ಹೀಗೆ ಅನೇಕ ವಿಧದ ವಿದ್ಯಾರ್ಥಿವೇತನ ವನ್ನು ವಿದ್ಯಾರ್ಥಿಗಳಿಗಾಗಿ ಸರ್ಕಾರವು ಘೋಷಿಸಿದೆ. .
- ಸರ್ಕಾರವು ಈ ವಿದ್ಯಾರ್ಥಿವೇತನಗಳ ಉಪಯೋಗವನ್ನು ವಿವಿಧ ಹಂತದಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ.
- ಎಲ್ಲಾ ಜಾತಿ, ಪಂಗಡ ಮತ್ತು ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳು ಸಹ ಈ ವಿದ್ಯಾರ್ಥಿವೇತನ ವನ್ನೂ ಪಡೆಯಲು ಅರ್ಹರಾಗಿರುತ್ತಾರೆ.
- ರಾಷ್ಟ್ರೀಯ ವಿದ್ಯಾರ್ಥಿವೇತನದ ಅಧಿಕೃತ ವೆಬ್ಸೈಟ್ ಅಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪರಿಶೀಲಿಸಬಹುದು.
ರಾಷ್ಟ್ರೀಯ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ :
- ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ನ ಅಧಿಕೃತ ವೆಬ್ಸೈಟ್ https://scholarships.gov.in/ ಗೆ ಭೇಟಿ ನೀಡಿ
- ಪೋರ್ಟಲ್ ಅಲ್ಲಿ ನೀಡಲಾದ ವಿದ್ಯಾರ್ಥಿವೇತನದ ಅರ್ಜಿಯನ್ನು ಆಯ್ಕೆ ಮಾಡಿ
- ಎಲ್ಲಾ ರೀತಿಯ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಅಪ್ಲಿಕೇಶನ್ ಆಯ್ಕೆ ಅಲ್ಲಿ ನೀಡಲಾಗಿರುತ್ತದೆ,
- ವಿದ್ಯಾರ್ಥಿಗಳು ಮೊದಲ ಭಾರಿ ಅರ್ಜಿಯನ್ನು ಸಲ್ಲಿಸುತ್ತಿದ್ದರೆ ಅಥವಾ ಆಗಲೇ ಈ ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದರೆ ಅಥವಾ ವಿದ್ಯಾರ್ಥಿವೇತನಕ್ಕೆ ಪುನಃ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಆ ಆಯ್ಕೆಯು ಕೂಡ ನೀಡಲಾಗುತ್ತದೆ,
- ವಿದ್ಯಾರ್ಥಿಗಳು ನೀಡಲಾದ ಆಯ್ಕೆಯನ್ನು ಆರಿಸಬೇಕು ನಂತರ ನೋಂದಣಿ ಮಾಡಲು ಆಧಾರ್ ಗುರುತಿನ ಚೀಟಿ ಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಯನ್ನು ನೀಡಿ ಅದಕ್ಕೆ ಬಂದ ಓ ಟಿ ಪಿ ಅನ್ನು ನಮೂದಿಸಿ
- ನಂತರ, ರಾಷ್ಟ್ರೀಯ ವಿದ್ಯಾರ್ಥಿವೇತನದ ಅರ್ಜಿ ತೆರೆಯುತ್ತದೆ, ಅದರಲ್ಲಿ ವಿದ್ಯಾರ್ಥಿವೇತನದ ಯೋಜನೆಗಳನ್ನು ಆಯ್ಕೆ ಮಾಡಬೇಕು ನಂತರ ನಿಮ್ಮ ಶೈಕ್ಷಣಿಕ ಚಟುವಟಿಕೆ ವಿವರವನ್ನು ಭರ್ತಿ ಮಾಡಬೇಕು.
- ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಅನೇಕ ಯೋಜನೆಯನ್ನು ನೀಡಲಾಗಿದೆ, ನೀವು ಅರ್ಜಿ ಸಲ್ಲಿಸಲು ಇಚ್ಛಿಸುವ ಯೋಜನೆಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಎಲ್ಲಾ ಯೋಜನೆಯ ಪ್ರಕ್ರಿಯೆಗಳು ಒಂದೇಯಾಗಿರುತ್ತದೆ,
- ಮನೆಯಲ್ಲಿಯೇ ಕುಳಿತು ಸಹ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- ಶಾಲಾ – ಕಾಲೇಜು ಹಾಗೂ ಯಾವುದೇ ಪದವಿ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು NSP ಮೂಲಕ ಅಂದರೆ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಮುಖಾಂತರ ವಿದ್ಯಾರ್ಥಿವೇತನಕ್ಕೆ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಬಹುದು. ವಿದ್ಯಾರ್ಥಿವೇತನಕ್ಕಾಗಿ ಇದು ಸರ್ಕಾರದ ಒಂದು ಮಾರ್ಗವಾಗಿದೆ.
NSP ಪಾವತಿ ಪರಿಶೀಲನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ :
ಸರ್ಕಾರದಿಂದ ವಿದ್ಯಾರ್ಥಿಗಳಿಗಾಗಿ ವಿವಿಧ ಯೋಜನೆಯಲ್ಲಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಈಗ ಸರ್ಕಾರವು ವಿದ್ಯಾರ್ಥಿವೇತನದ ಹಣವನ್ನು ಒಂದೇ ಜಾಗದಲ್ಲಿ ಪರಿಶೀಲಿಸಲು ಅಧಿಕೃತ ವೆಬ್ಸೈಟ್ ಅನ್ನು ಬಿಡುಗಡೆ ಮಾಡಿದೆ. ಅದರ ಲಿಂಕ್ ಅನ್ನು ಸಹ ನೀಡಲಾಗಿದೆ. ಈ ವಿದ್ಯಾರ್ಥಿವೇತನವನ್ನು ಪಡೆಯಲು NSP ಪೋರ್ಟಲ್ ಅಲ್ಲಿ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಿ . DBT ಮೂಲಕ ಹಣವನ್ನು ನೀಡಲಾಗುತ್ತದೆ. ಈ ಹಣವನ್ನು ಸರ್ಕಾರ ಘೋಷಿಸಿರುವ NSP ಪೋರ್ಟಲ್ ಮೂಖಾಂತರ ಪರಿಶೀಲಿಸಬಹುದಾಗಿದೆ, ಅದರ ಪ್ರಕ್ರಿಯೆ ಮತ್ತು ಲಿಂಕ್ ಅನ್ನು ನೀಡಲಾಗಿದೆ. ಅದರ ಮುಖಾಂತರ ನಿಮ್ಮ DBT ಹಣವನ್ನು ಮನೆಯಲ್ಲಿ ಕುಳಿತು ಪರಿಶೀಲಿಸಬಹುದು.