ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ನೀಡಲಾದ ಸೇವೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಈತ್ತಿಚೆಗೆ ರಾಜ್ಯದ ಗ್ರಾಮೀಣ ಜನರಿಗೆ ಸುಲಭವಾಗುವಂತೆ, ಸರ್ಕಾರವು ಅನೇಕ ಸೇವಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಿದೆ. ಪ್ರಮುಖವಾಗಿ ಸ್ಥಳೀಯ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಬೇಕೆಂಬ ಉದ್ದೇಶದಿಂದ ಸರ್ಕಾರವು ಈ ನಿರ್ಧಾರವನ್ನು ಜಾರಿಗೊಳಿಸಿದೆ. ಗ್ರಾಮ ಪಂಚಾಯ್ತಿಯಿಂದ ನೀಡಲಾದ ಸೇವೆಗಳು ಮತ್ತು ಅದರ ಉದ್ದೇಶಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

1] ಬಾಪೂಜಿ ಸೇವಾ ಕೇಂದ್ರ (ಬಿ.ಎಸ್.ಕೆ.)

ಗ್ರಾಮಾಂತರ ಜನರು ಸ್ವಯಂ ಉದ್ಯೋಗ ಮಾಡಬೇಕು ಮತ್ತು ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಕಾರ್ಯಾಚರಣೆಗಳಿಗಾಗಿ ಸರ್ಕಾರವು ಸಾಲದ ಸೌಲಭ್ಯ ವನ್ನು ನೀಡುತ್ತದೆ. ಇವುಗಳನ್ನು ಒಂದೇ ಸೂರಿನಡಿ ಬಹು ಬೇಗ ಪಡೆಯಲು ಅನುಕೂಲವಾಗಬೇಕೆಂದು ಗ್ರಾಮ ಪಂಚಾಯಿತಿಯಲ್ಲಿ ಬಾಪೂಜಿ ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಗ್ರಾಮ ಪಂಚಾಯಿತಿಗಳಲ್ಲಿ ಪಂಚತಂತ್ರ, ನಾಡಕಛೇರಿ ತಂತ್ರಾಂಶ ಹಾಗೂ ಭೂಮಿ ತಂತ್ರಾಂಶಗಳಿಗೆ ಸಂಬಂಧಿಸಿದ ಸೇವೆಯನ್ನು ನೀಡುತ್ತಿದೆ. ಈಗಾಗಲೆ 19 ಸೇವೆಗಳನ್ನು ನೀಡುತಿದ್ದು ಅದರ ಜೊತೆಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ಪಹಣಿ ಪತ್ರ ಸೇರಿದಂತೆ 40 ಸೇವೆಗಳನ್ನು ಒಂದೇ ಸೂರಿನಡಿ ದೊರಕುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಗ್ರಾಮೀಣ ಜನರು ತಮ್ಮ ದಾಖಲೆಗಳನ್ನು ಪಡೆಯಲು ಒಂದು ಕಛೇರಿಯಿಂದ ಮತೊಂದು ಕಛೇರಿಗೆ ತಿರುಗುವುದು ತಪ್ಪುತ್ತದೆ.

ಬಾಪೂಜಿ ಸೇವ ಕೇಂದ್ರದಿಂದ ದೊರೆಯುವ ಸೇವೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

  1. ಕಟ್ಟಡಪರವಾನಗಿ
  2. ತೆರಿಗೆ ನಿರ್ಧರಣಾ ಪಟ್ಟಿ ವಿತರಣೆ
  3. ಕಟ್ಟಡ ಸ್ವಾಧೀನ ಪತ್ರ
  4. ಹೊಸ ನೀರಿನ ಸಂಪರ್ಕಕ್ಕಾಗಿ ಅರ್ಜಿ
  5. ವ್ಯಾಪಾರ ಪರವಾನಗಿ ವಿತರಣೆ (ಹೊಟೇಲ್‌ ಮತ್ತು ಅಂಗಡಿ)
  6. ಕಾರ್ಖಾನೆಗೆ ಅನುಮತಿ ಪತ್ರ
  7. ಜಾಹೀರಾತು ಪರವಾನಗಿ
  8. ನೀರಿನ ಸಂಪರ್ಕ ಕಡಿತ
  9. ಕುಡಿಯುವ ನೀರಿನ ನಿರ್ವಹಣೆ (ಸಣ್ಣ ರಿಪೇರಿ)
    10, ಬೀದಿ ದೀಪಗಳ ನಿರ್ವಹಣೆ
  10. ಗ್ರಾಮ ನೈರ್ಮಲ್ಯ ನಿರ್ವಹಣೆ
  11. ESCOMS ನಿರಾಕ್ಷೇಪಣೆ ಪತ್ರ
  12. ನಮೂನೆ 9/11 Form 9/11A
  13. ನಮೂನೆ 9/11 B-Form 9/11B
  14. ರಸ್ತೆ ಅಗೆಯುವುದಕ್ಕಾಗಿ ಅನುಮತಿ
    16, ಅಕುಶಲ ಕಾರ್ಮಿಕರಿಗೆ ಉದ್ಯೋಗ ಚೀಟಿಯನ್ನು ಒದಗಿಸುವುದು (ಎಂ.ಜಿ.ಎನ್‌.ಆರ್‌.ಇ.ಜಿ.ಎಸ್) 11. ಗ್ರಾಮ ನೈರ್ಮಲ್ಯ ನಿರ್ವಹಣೆ
  15. ಅಕುಶಲ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುವುದು (ಎಂ.ಜಿ.ಎನ್.ಆರ್.ಇ.ಜಿ.ಎಸ್)

2] ಕಂದಾಯ ಇಲಾಖೆಯ 40 ಸೇವೆಗಳು

ಗ್ರಾಮೀಣ ಜನರಿಗೆ ಸರ್ಕಾರ ಕೈಕೊಂಡಿರುವ ಅನೇಕ ಯೋಜನೆಗಳ ಬಗ್ಗೆ ತಿಳಿದಿರುವುದಿಲ್ಲ ಯಾಕೆಂದರೆ ಒಂದೊಂದು ಯೋಜನೆಯ ಉಪಯೋಗವನ್ನು ಪಡೆಯಲು ಒಂದೊಂದು ಸೇವ ಕೇಂದ್ರಕ್ಕೆ ಅಥವಾ ಕಚೇರಿಗಳಿಗೆ ಹೋಗಬೇಕು ಆದರಿಂದ ಎಲ್ಲ ಯೋಜನೆಗಳು ಒಂದೇ ಸೂರಿನಡಿ ಸಿಗಬೇಕೆಂದು ಸರ್ಕಾರವು ಈ ಕ್ರಮವನ್ನು ಕೈಕೊಂಡಿದೆ .

ಕಂದಾಯ ಇಲಾಖೆಯಲ್ಲಿ ಸಿಗುವ 40 ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

  1. ಜನಸಂಖ್ಯೆ ದೃಢೀಕರಣ ಪತ್ರ
  2. ಜಾತಿ ಮತ್ತು ಆದಾಯ ದೃಢೀಕರಣ ಪತ್ರ
  3. ಹಿಂದುಳಿದ ವರ್ಗಗಳ ಪ್ರಮಾಣ ಪತ್ರ (ಪ್ರವರ್ಗ-1)
  4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗಳ
    ಪ್ರಮಾಣ ಪತ್ರ
  5. ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (ಕೇಂದ್ರ)
  6. ವಾಸಸ್ಥಳ ದೃಢೀಕರಣ ಪತ್ರ
  7. ಆದಾಯ ದೃಢೀಕರಣ ಪತ್ರ
  8. ಗೇಣಿ ರಹಿತ ದೃಢೀಕರಣ ಪತ್ರ
  9. ವಿಧವಾ ದೃಢೀಕರಣ ಪತ್ರ
  10. ಜೀವಂತ ದೃಢೀಕರಣ ಪತ್ರ
  11. ವ್ಯವಸಾಯಗಾರರ ಕುಟುಂಬದ ಸದಸ್ಯರ ದೃಢೀಕರಣ ಪತ್ರ
  12. ಮರು ವಿವಾಹವಾಗದಿರುವ ದೃಢೀಕರಣ ಪತ್ರ
  13. ಜಮೀನು ಇಲ್ಲದಿರುವ ದೃಢೀಕರಣ ಪತ್ರ
  14. ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ
  15. ನಿರುದ್ಯೋಗಿ ದೃಢೀಕರಣ ಪತ್ರ
  16. ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ
  17. ವ್ಯವಸಾಯಗಾರರ ದೃಢೀಕರಣ ಪತ್ರ

3] ಆರೋಗ್ಯ ಕರ್ನಾಟಕ ಕಾರ್ಡ್

ಸರ್ಕಾರವೂ ಎಲ್ಲಾ ಪ್ರಜೆಗಳು ಉತ್ತಮ ಆರೋಗ್ಯವನ್ನು ಹೊಂದಿರಬೇಕು ಮತ್ತು ಅವರ ಆರ್ಥಿಕ ಪರಿಸ್ಥಿಯನ್ನು ದೂರ ಮಾಡಬೇಕೆಂಬ ಉದ್ದೇಶದಲ್ಲಿ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಪ್ರಾರಂಭಿಸಿದೆ . ಈ ಯೋಜನೆಯಲ್ಲಿ ಅನೇಕ ಆರೋಗ್ಯ ಯೋಜನೆಯ ಸಂಪನ್ಮೂಲವನ್ನು ಒಳಗೊಂಡಿದೆ. ವಾಜಪೇಯಿ ಆರೋಗ್ಯಶ್ರೀ,ರಾಜೀವ್ ಆರೋಗ್ಯ ಭಾಗ್ಯ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ಇಂದಿರಾ ಸುರಕ್ಷಾ ಯೋಜನೆ ಯಶಸ್ವಿನಿ ಯೋಜನೆಗಳಂತಹ ಅನೇಕ ಯೋಜನೆಯನ್ನು ಒಳಗೊಂಡಿದೆ.

ಈ ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆ ಮತ್ತು ಚಿಕಿತ್ಸೆ ಗೆ ಸಿಗುವ ಮೊತ್ತ ದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

  • ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಹಾಗೂ ರಾಷ್ರ್ಟೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ ರೂ.5.00 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ಲಭ್ಯ ಇರುತ್ತದೆ .
  • ಎಪಿಎಲ್ ಆಥವಾ ಬಿಪಿಎಲ್ ರೇಷನ್ ಕಾರ್ಡ್ ಹೊಂದಿಲ್ಲದವರಿಗೆ ಸಹ-ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ 30% ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷ ಲಭ್ಯ ಇರುತ್ತದೆ. ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ತೋರಿಸಿ ಚಿಕಿತ್ಸೆ ಪಡೆಯ ಬಹುದು.

ಈ ಯೋಜನೆಯಲ್ಲಿ ದೊರೆಯುವ ಚಿಕಿತ್ಸೆ ಗಳು ಯಾವುವು ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಸಾಮಾನ್ಯವಾಗಿ ದ್ವಿತೀಯ ಹಂತದಲ್ಲಿ 291 ಚಿಕಿತ್ಸಾ ವಿಧಾನಗಳಿವೆ ಮತ್ತು
  • ಕ್ಲಿಷ್ಟಕರ ದ್ವಿತೀಯ ಹಂತದಲ್ಲಿ 254 ಚಿಕಿತ್ಸಾ ವಿಧಾನಗಳಿವೆ.
  • ಮಾರಣಾಂತಿಕ ಕಾಯಿಲೆಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ರೋಗ, ಕ್ಯಾನ್ಸರ್, ನರಕ್ಕೆ ಸಂಬಂಧಿಸಿದ ರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳಲ್ಲಿ ಕಂಡು ಬರುವ ಕಾಯಿಲೆ ಇತ್ಯಾದಿ ಇನ್ನೂ ಅನೇಕ ತೃತೀಯ ಹಂತದಲ್ಲಿ 900 ಚಿಕಿತ್ಸಾ ವಿಧಾನಗಳಿವೆ .
  • ತುರ್ತು ಚಿಕಿತ್ಸೆಗಳಲ್ಲಿ 169 ಮತ್ತು ಉಪಚಿಕಿತ್ಸಾ ಗಳಲ್ಲಿ 36 ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳು ಈ ಯೋಜನೆಯಲ್ಲಿ ಸಿಗುತ್ತದೆ.

ತುರ್ತು ಚಿಕಿತ್ಸೆ ಇದ್ದಾಗ ಯಾವುದೇ ರೆಫರಲ್ ಬಳಸದೆ ನೇರವಾಗಿ ನೋಂದಾಯಿತ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ತೆಗೆದುಕೊಳ್ಳಬಹುದು.

ಆರೋಗ್ಯ ಕಾರ್ಡ್ ಮಾಡಿಸುವುದು ಎಲ್ಲಿ ಮತ್ತು ಮಾಡಿಸಲು ಬೇಕಿರುವ ಮೊತ್ತ ದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಕಾರ್ಡ್‌ನ್ನು ಮಾಡಿಕೊಡಲಾಗುತ್ತದೆ . ಇದಕ್ಕೆ ರೂ.10/- ಶುಲ್ಕ ಪಾವತಿಸಿ ಕಾರ್ಡ್ ಪಡೆಯಬಹುದು.
  • ಅದಲ್ಲದೆ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿಯೂ ಕೂಡ ಈ ಕಾರ್ಡ್ ಅನ್ನು ಮಾಡಿಕೊಡಲಾಗುತ್ತೆ . ಇದಕ್ಕೆ ರೂ.35/- ಶುಲ್ಕ ಪಾವತಿಸಿ ಕಾರ್ಡ್ ಪಡೆಯಬಹುದು.
  • ಈ ಕಾರ್ಡ್ ಅನ್ನು ಪಡೆಯಲು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್‌ ದಾಖಲೆಗಳನ್ನು ನೀಡಿ ಈ ಆರೋಗ್ಯ ಕಾರ್ಡ್ ಅನ್ನು ಪಡೆಯಬಹುಡು.

ಯಾವ ಆಸ್ಪತ್ರೆ ಗಳಲ್ಲಿ ಈ ಯೋಜನೆ ಯನ್ನು ಪಡೆಯಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಈ ಯೋಜನೆಯು ಎಲ್ಲ ಆಸ್ಪತ್ರೆ ಗಳಲ್ಲಿ ದೊರೆಯುವುದಿಲ್ಲ ಕೆಲವೊಂದು ನೋಂದಾಯಿತ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬಹುದು.104 ಕ್ಕೆ ಕರೆ ಮಾಡಿ ನಿಮಗೆ ಬೇಕಾದ ಮಾಹಿತಿಯನ್ನು ತಿಳಿಯಬಹುದು. ಅದಲ್ಲದೆ ಟೋಲ್ ಫ್ರೀ ಸಂಖ್ಯೆ 1800 425 8330 ಗೆ ಕೂಡ ಕರೆ ಮಾಡಿ ನಿಮಗೆ ಬೇಕಾಡೆ ಮಾಹಿತಿ ಯಾನ್ನು ಪಡೆಯಬಹುದು.

ಈ ಯೋಜನೆಯು ವಿಕಲಚೇತನರಿಗೆ ಹೇಗೆ ಉಪಯುಕ್ತವಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

  • ಈ ಯೋಜನೆಯಲ್ಲಿ ಪ್ರಮುಖವಾಗಿ ವಿಕಲಚೇತನರಿಗೆ ಗುರುತಿನ ಕಾರ್ಡ್ ನೀಡಲಾಗುತ್ತದೆ. ಇದರಿಂದ
  • ವಿಕಲಚೇತನರು ತುಂಬಾ ದಾಖಲೆಗಳನ್ನು ಮಾಡಿಸುವ ಅಗತ್ಯ ಇರುವುದಿಲ್ಲ.ವಿಕಲಚೇತನರು ಇದನ್ನು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ. ಅದಲ್ಲದೆ ಆನ್‌ಲೈನ್ ಮುಖಾಂತರ ಕೂಡ ಅರ್ಜಿ ಸಲ್ಲಿಸಬಹುದು.
  • ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಮಾತ್ರ
  • ತುರ್ತಾಗಿ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ.

ವಿಕಲಚೇತನರು ಈ ಕಾರ್ಡ್ ಅನ್ನು ಮಾಡಿಸಲು ಬೇಕಾದ ದಾಖಲೆಗಳ ಮಾಹಿತಿ ಇಲ್ಲಿದೆ.

  • ಭಾವಚಅಪತ್ರ
  • ಹಸ್ತಾಕ್ಷರದ ಸ್ಕ್ಯಾನ್ ಪ್ರತಿ [ಸಹಿ]
  • ವಿಳಾಸದ ಗುರುತಿನ ಪ್ರತಿ [ವಾಸ ದೃಢೀಕರಣ ಪತ್ರ]
  • ವ್ಯಕ್ತಿಗಳ ಗುರುತಿನ ಪ್ರತಿ [ಆಧಾರ್ ಕಾರ್ಡ್/ ಪಾನ್ ಕಾರ್ಡ್]
  • ವಿಕಲಚೇತನತೆಯ ದೃಢೀಕರಣ ಪತ್ರ

ಮೇಲ್ಕಂಡ ದಾಖಲಾತಿಗಳನ್ನು ನೀಡಿ ಅರ್ಜಿ ಹಾಕಿದ ನಾಲ್ಕು ವಾರದಲ್ಲಿ ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿಯನ್ನು ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತಾ ರೆ.

Leave a Reply