ಸಿಬ್ಬಂದಿ ಆಯ್ಕೇ ಆಯೋಗ ( SSC) ನೇಮಕಾತಿ – 2023 ವಿವಿಧ ಕಾನ್ಸ್ಟೇಬಲ್ ಹಾಗೂ ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಿಬ್ಬಂದಿ ಆಯ್ಕೆ ಆಯೋಗ ( staff selection commission ) 2023 ರ ಹೊಸ ಬೃಹತ್ ನೇಮಕಾತಿ ಆದೇಶ ಹೊರಡಿಸಿದೆ. ಸಾಮಾನ್ಯ ಕರ್ತವ್ಯ ಪೋಲಿಸಿನವನು ( general duty constable ) ಮತ್ತು ಇತರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ 28-12-2023 ರ ಮೊದಲು ಅರ್ಜಿ ಸಲ್ಲಿಸಬೇಕು.

ಸಂಸ್ಥೆ : ಸಿಬ್ಬಂದಿ ಆಯ್ಕೆ ಆಯೋಗ ( staff selection commission )
ಹುದ್ದೆಯ ವಿಧ : ಕೇಂದ್ರ ಸರ್ಕಾರದ ಹುದ್ದೆಗಳು
ಹುದ್ದೆಯ ಹೆಸರು : ಸಾಮಾನ್ಯ ಕರ್ತವ್ಯ ಪೊಲೀಸ್ ಪೇದೆ ( general duty constable)
ಒಟ್ಟು ಖಾಲಿ ಹುದ್ದೆಗಳು : 75768
ವೇತನ ಶ್ರೇಣಿ : ರೂ.18000-69100/- ಪ್ರತಿ ತಿಂಗಳು
ಅರ್ಜಿ ಸಲ್ಲಿಸುವ ವಿಧಾನ: ಅನ್ ಲೈನ್
ಸಿಬ್ಬಂದಿ ಆಯ್ಕೆ ಆಯೋಗದ ಖಾಲಿ ಹುದ್ದೆಗಳ ವಿವರ:
ಹುದ್ದೆಯ ಹೆಸರು ಖಾಲಿ ಹುದ್ದೆಗಳ ಸಂಖ್ಯೆ
ಗಡಿ ಭದ್ರತಾ ಪಡೆ ( BSF )27875
ಕೇಂದ್ರ ಕೈಗಾರಿಕಾ ಭದ್ರತಾ ಪಡೆ ( CSIF ) 8598
ಕೇಂದ್ರ ಮೀಸಲು ಪೊಲೀಸ್ ಪಡೆ ( CRPF ) 25427
ಸೇವಾ ಆಯ್ಕೆ ಮಂಡಳಿ ( SSB ) 5278
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ( ITBP) 3006
ಅಸ್ಸಾಂ ರೈಫಲ್ಸ್ ( Assam Rifles ) 4776
ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್ (SSF)583
ರಾಷ್ಟ್ರೀಯ ತನಿಖಾ ಸಂಸ್ಥೆ ( NIA)225
ಸಿಬ್ಬಂದಿ ಆಯ್ಕೆ ಆಯೋಗ ನೇಮಕಾತಿ ಶೈಕ್ಷಣಿಕ ಅರ್ಹತೆ:

ಸಿಬ್ಬಂದಿ ಆಯ್ಕೆ ಆಯೋಗ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ಅಭ್ಯರ್ಥಿಯ ವಯೋಮಿತಿ :

ಸಿಬ್ಬಂದಿ ಆಯ್ಕೆ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯೋಮಿತಿ 01-ಆಗಸ್ಟ್-2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 23 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ :
  • ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 03 ವರ್ಷ ವಯೋಮಿತಿ ಸಡಿಲಿಕೆ ಇದೆ.
  • ಪರಿಶಿಷ್ಟ ಜಾತಿ ( ST ) ಪರಿಶಿಷ್ಟ ಪಂಗಡ ( SC ) ಅಭ್ಯರ್ಥಿಗಳಿಗೆ 05 ವರ್ಷ ವಯೋಮಿತಿ ಸಡಿಲಿಕೆ ಕಲ್ಪಿಸಲಾಗಿದೆ.
ಅರ್ಜಿ ಶುಲ್ಕ :
  • ಮಹಿಳಾ ( women )/ ಪರಿಶಿಷ್ಟ ಜಾತಿ ( ST ) ಪರಿಶಿಷ್ಟ ಪಂಗಡ ( SC ) / ಮಾಜಿ ಸೈನಿಕರು ( Ex- Servicemen) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
  • ಉಳಿದ ಇತರೆ ಎಲ್ಲಾ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕ ರೂ.100/- ಆಗಿರುತ್ತದೆ.
  • ಅರ್ಜಿ ಪಾವತಿಯ ವಿಧಾನ : ಅನ್ ಲೈನ್/ ಚಲನ್ ಮೂಲಕ ಪಾವತಿ ಮಾಡಬಹುದಾಗಿದೆ.
ಅಭ್ಯರ್ಥಿಯ ಆಯ್ಕೆ ವಿಧಾನ;
  • ಕಂಪ್ಯೂಟರ್ ಆಧಾರಿತ ಪರೀಕ್ಷೆ ( computer based exam )
  • ದೈಹಿಕ ದಕ್ಷತೆಯ ಪರೀಕ್ಷೆ ( physical efficiency test )
  • ದೈಹಿಕ ಪ್ರಮಾಣಿತ ಪರೀಕ್ಷೆ ( Physical Standard Test )
  • ವೈದ್ಯಕೀಯ ಪರೀಕ್ಷೆಯನ್ನು ಪರಿಶೀಲಿಸಿ ( Review Medical Examination )
  • ಸಂದರ್ಶನ ( interview )
ಸಿಬ್ಬಂದಿ ಆಯ್ಕೆ ಆಯೋಗ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ ;
  • ಮೊದಲನೆಯದಾಗಿ SSC ನೇಮಕಾತಿ ಅಧಿಸೂಚನೆ ಲಿಂಕ್ ಮೂಲಕ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
  • ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ.
  • ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
  • ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಲ್ಲಿಸಿ.
  • ಸಿಬ್ಬಂದಿ ಆಯ್ಕೆ ಆಯೋಗ ಕಾನ್ಸ್ಟೇಬಲ್ GD ಅಧಿಸೂಚನೆಗೆ ಕ್ಲಿಕ್ ಮಾಡಿ ಕೆಳಗೆ ನೀಡಲಾಗಿದೆ.
  • ಸಿಬ್ಬಂದಿ ಆಯ್ಕೆ ಆಯೋಗದ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಲ್ಲಿಸಿ ಮತ್ತು ಅಗತ್ಯವಿದ್ದರೆ ಫೋಟೋ ಕಾಪಿಯನ್ನು ಸಲ್ಲಿಸಿ.
  • ಅರ್ಜಿ ಶುಲ್ಕ ಅನ್ವಯಿಸಿದರೆ ಪಾವತಿ ಮಾಡಿ.
  • ಕೊನೆಯದಾಗಿ ‘ ಅರ್ಜಿ ಸಲ್ಲಿಸಿ ‘ ಮೇಲೆ ಕ್ಲಿಕ್ ಮಾಡಿ ಮತ್ತು ಸಿಬ್ಬಂದಿ ಆಯ್ಕೆ ಆಯೋಗದ ನೇಮಕಾತಿಗೆ ಅರ್ಜಿ ಸಲ್ಲಿಸಿ, ಧನ್ಯವಾದಗಳು.
ಅನ್ ಲೈನ್ ನಲ್ಲಿ ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ: 24-11-2023
ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ: 28-12-2023

ಆಫ್ ಲೈನ್ ನಲ್ಲಿ ಚಲನ್ ಪಾವತಿಸಲು ಕೊನೆಯ ದಿನಾಂಕ: 28- 12-2023

ಅನ್ ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಲು / ಚಲನ್ ಮೂಲಕ ಪಾವತಿ ಮಾಡಲು ಕೊನೆಯ ದಿನಾಂಕ: 29-12-2023

ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿಯ ದಿನಾಂಕ : ಫೆಬ್ರವರಿ 2024

Leave a Reply