ಕೃಷಿ ಇಲಾಖೆ ನೇಮಕಾತಿ 2023 – ಖಾಲಿ ಇರುವ 260 ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕೇಂದ್ರ ಕೃಷಿ ಇಲಾಖೆಯ ಅಡಿಯಲ್ಲಿ ಬರುವ ಕೃಷಿ ವಿಜ್ಞಾನ ನೇಮಕಾತಿ ಮಂಡಳಿಯಿಂದ 2023 ನೇ ಸಾಲಿನ ಕೃಷಿ ಸಂಶೋಧನಾ ಸೇವೆಗಳು (ARS) ಪರೀಕ್ಷೆಯನ್ನು 2023 ಅಕ್ಟೋಬರ್/ ನವೆಂಬರ್ ನಲ್ಲಿ ನಡೆಸಲು ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಕೃಷಿ ಸಂಶೋಧನಾ ಸೇವೆಯಲ್ಲಿ ವಿಜ್ಞಾನಿ [Scientist in Agricultural Research Service] ಹುದ್ದೆಗಳ ನೇರ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ.

ಸಂಸ್ಥೆ : ಕೃಷಿ ಇಲಾಖೆ

ಪ್ರಮುಖ ವಿವರಗಳು :

ವಿಧ :
ಸರ್ಕಾರಿ ಉದ್ಯೋಗಗಳು
ಹುದ್ದೆಯ ಹೆಸರು :ಕೃಷಿ ಸಂಶೋಧನಾ ಸೇವೆಯಲ್ಲಿ ವಿಜ್ಞಾನಿ
ಒಟ್ಟು ಖಾಲಿ ಹುದ್ದೆಗಳು :260
ಸ್ಥಳ :ಭಾರತದಾದ್ಯಂತ
ಅರ್ಜಿ ಸಲ್ಲಿಸುವ ವಿಧಾನ :ಆನ್ಲೈನ್

ಖಾಲಿ ಹುದ್ದೆಗಳ ವಿವರಗಳು :

  • ಪರಿಶಿಷ್ಟ ಜಾತಿ – 28
  • ಪರಿಶಿಷ್ಟ ಪಂಗಡ – 20
  • ಓಬಿಸಿ – 69
  • ಆರ್ಥಿಕವಾಗಿ ಹಿಂದೂಳಿದ ವರ್ಗ – 25
  • ಸಾಮಾನ್ಯ ವರ್ಗ – 118

ಶೈಕ್ಷಣಿಕ ಅರ್ಹತೆ :

  • ಮೇಲ್ಕಂಡ ಹುದ್ದೆಗಳ ನೇಮಕಾತಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳು ದಿನಾಂಕ 30-09-2023 ರ ಒಳಗಾಗಿ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಪಿಎಚ್ಡಿ ಪದವಿಯನ್ನು ಹೊಂದಿರಬೇಕು.

ವಯಸ್ಸಿನ ಮಿತಿ :

  • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕನಿಷ್ಟ 18 ವರ್ಷ ಪೂರೈಸಿರಬೇಕು & ಗರಿಷ್ಟ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ [Age relaxation] :

  • ಪಜಾ/ಪಪಂ ಅಭ್ಯರ್ಥಿಗಳಿಗೆ: 05 ವರ್ಷ
  • ಇತರೆ ಹಿಂದೂಳಿದ ವರ್ಗ: 03 ವರ್ಷ
  • ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ

ವೇತನ ಶ್ರೇಣಿಯ ವಿವರಗಳು :

  • ಕೇಂದ್ರ ಸರ್ಕಾರದ 7ನೇ ವೇತನ ಆಯೋಗದಂತೆ ಲೆವೆಲ್ 10 ನೇ ಶ್ರೇಣಿಯಲ್ಲಿ ರೂ. 57700-182400 ಮೂಲ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.ಈ ವೇತನದ ಜೊತೆಗೆ ಗ್ರೇಡ್ ಪೇ, ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

ಅರ್ಜಿ ಶುಲ್ಕ :

  • ಸಾಮಾನ್ಯ/ OBC/ EWS ಅಭ್ಯರ್ಥಿಗಳು ರೂ 800/- ಪಾವತಿಸಬೇಕು
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ ಮಹಿಳೆ/ ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
  • ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಪಾವತಿ ಮಾಡಬಹುದು.

ಆಯ್ಕೆ ಪ್ರಕ್ರಿಯೆ :

  • ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ

ಅರ್ಜಿ ಸಲ್ಲಿಸುವುದು ಹೇಗೆ :

  • ಈ ನೇಮಕಾತಿಗಾಗಿ ಆಫ್ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 05.07.2023 ರಿಂದ 26.07.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ASRB ವೆಬ್ ಸೈಟ್ https://www.asrb.org.in ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :05-07-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :26-07-2023

Leave a Reply