ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2023 – 09 ಎಂಬಿಬಿಎಸ್ ವೈದ್ಯರು, ಪ್ರಯೋಗಶಾಲಾ ತಂತ್ರಜ್ಞರು, ಶುಶ್ರೂಷಕ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೋಲಾರ ಜಿಲ್ಲೆಯಲ್ಲಿ ನಮ್ಮ ಕ್ಲಿನಿಕ್ ಗೆ ಅನುಮೋದನೆಯಾಗಿರುವ ವಿವಿಧ ವೃಂದದ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ . ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ .

ಸಂಸ್ಥೆ : ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಪ್ರಮುಖ ವಿವರಗಳು :

ವಿಧ : ಸರ್ಕಾರಿ ಉದ್ಯೋಗಗಳು
ಹುದ್ದೆಯ ಹೆಸರು : ಎಂಬಿಬಿಎಸ್ ವೈದ್ಯರು, ಪ್ರಯೋಗಶಾಲಾ ತಂತ್ರಜ್ಞರು, ಶುಶ್ರೂಷಕ ಅಧಿಕಾರಿಗಳು
ಒಟ್ಟು ಖಾಲಿ ಹುದ್ದೆಗಳು : 09
ಸ್ಥಳ : ಕೋಲಾರ
ಅರ್ಜಿ ಸಲ್ಲಿಸುವ ವಿಧಾನ : ಆಫ್ಲೈನ್

ಖಾಲಿ ಹುದ್ದೆಗಳ ವಿವರಗಳು :

  • ಎಂಬಿಬಿಎಸ್ ವೈದ್ಯರು – 05
  • ಪ್ರಯೋಗಶಾಲಾ ತಂತ್ರಜ್ಞರು – 02
  • ಶುಶ್ರೂಷಕ ಅಧಿಕಾರಿಗಳು – 02

ಶೈಕ್ಷಣಿಕ ಅರ್ಹತೆ :

  • ಎಂಬಿಬಿಎಸ್ ವೈದ್ಯರು – ಎಂಬಿಬಿಎಸ್ ಉತ್ತೀರ್ಣರಾಗಿ ಕಡ್ಡಾಯವಾಗಿ Internship ಪೂರೈಸಿರಬೇಕು ಹಾಗೂ ಕೆ.ಎಮ್.ಸಿ ನೋಂದಣಿ ಹೊಂದಿರಬೇಕು.
  • ಪ್ರಯೋಗಶಾಲಾ ತಂತ್ರಜ್ಞರು – ಎಸ್ಎಸ್ಎಲ್ ಸಿ/ಪಿಯುಸಿ ಮತ್ತು ಪ್ರಯೋಗಶಾಲಾ ತಂತ್ರಜ್ಞತೆಯ ಡಿಪ್ಲೋಮೋ ಉತ್ತೀರ್ಣ ಹೊಂದಿರಬೇಕು. ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯ ನೋಂದಣಿ ಮತ್ತು ಕಂಪ್ಯೂಟರ್ ಸಾಕ್ಷರತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
  • ಶುಶ್ರೂಷಕ ಅಧಿಕಾರಿಗಳು – ಮಾನ್ಯತೆ ಪಡೆದ ನರ್ಸಿಂಗ್‌ ಶಾಲೆಯಲ್ಲಿ ಬಿ.ಎಸ್.ಸಿ / ಜಿಎನ್‌ ಎಂ ನರ್ಸಿಂಗ್ ನಲ್ಲಿ ಕೆಎನ್‌ ಸಿ ನೋಂದಣಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಸಾಕ್ಷರತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.

ವಯಸ್ಸಿನ ಮಿತಿ :

  • ಎಂಬಿಬಿಎಸ್ ವೈದ್ಯರು – ಗರಿಷ್ಠ 65 ವರ್ಷ
  • ಪ್ರಯೋಗಶಾಲಾ ತಂತ್ರಜ್ಞರು – ಗರಿಷ್ಠ 40 ವರ್ಷ
  • ಶುಶ್ರೂಷಕ ಅಧಿಕಾರಿಗಳು – ಗರಿಷ್ಠ 40 ವರ್ಷ

ವೇತನ ಶ್ರೇಣಿಯ ವಿವರಗಳು :

  • ಎಂಬಿಬಿಎಸ್ ವೈದ್ಯರು – ರೂ.43,141/-
  • ಪ್ರಯೋಗಶಾಲಾ ತಂತ್ರಜ್ಞರು – ರೂ. 13,225/-
  • ಶುಶ್ರೂಷಕ ಅಧಿಕಾರಿಗಳು – ರೂ.12,839/-

ಆಯ್ಕೆ ಪ್ರಕ್ರಿಯೆ :

  • ದಾಖಲೆಗಳ ಪರಿಶೀಲನೆ [Document verification]
  • ಸಂದರ್ಶನ [Interview]

ಅರ್ಜಿ ಸಲ್ಲಿಸುವುದು ಹೇಗೆ :

ಸಂದರ್ಶನ ಮೂಲಕ ಹುದ್ದೆಗಳಿಗೆ ನೇಮಕ ಮಾಡಲಾಗುವುದು.

  • ಅಭ್ಯರ್ಥಿಯು ಸಂದರ್ಶನಕ್ಕೆ ಹಾಜರಾಗುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ನೇರ ಸಂದರ್ಶನಕ್ಕೆ ಹಾಜರಾಗಬೇಕು.
  • ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ತಮ್ಮ ಮೂಲ ದಾಖಲಾತಿಗೂಂದಿಗೆ 1 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಈ ಕೆಳಗಡೆ ನೀಡಲಾಗಿರುವ ಕಛೇರಿಯ ವಿಳಾಸಕ್ಕೆ ಹಾಜರಾಗಬೇಕು.

ಸಂದರ್ಶನ ಸ್ಥಳ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಕೆ.ಎನ್.ಟಿ.ಬಿ. ಸ್ಯಾನಿಟೋರಿಯಂ ಆಸ್ಪತ್ರೆ ಆವರಣ, ಬಂಗಾರಪೇಟೆ ರಸ್ತೆ, ಕೋಲಾರ.

ಸಂದರ್ಶನ ನಡೆಯುವ ದಿನಾಂಕದ ವಿವರ :
ನೇರ ಸಂದರ್ಶನ ನಡೆಯುವ ದಿನಾಂಕ : ಜೂನ್ 13, 2023 ರಂದು ಬೆಳಿಗ್ಗೆ 10.00 ಗಂಟೆಗೆ

Leave a Reply