ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 5 ನೇ ಕಂತಿನ ಹಣ ಜಮಾ ಆಗಿದೆ. ನಿಮ್ಮ ಖಾತೆಯ ಸ್ಥಿತಿ ಪರಿಶೀಲಿಸುವ ಹೊಸ ಲಿಂಕ್ ಇಲ್ಲಿದೆ.

ಕರ್ನಾಟಕದ ಕಾಂಗ್ರೆಸ್ಸ್ ಸರ್ಕಾರವು ರಾಜ್ಯದಲ್ಲಿರುವ ಪ್ರತಿ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವ ಬಹುದೊಡ್ಡ ಯೋಜನೆಯೇ ಈ ಗೃಹಲಕ್ಷ್ಮಿ ಯೋಜನೆ. ಈ ಯೋಜನೆಯಲ್ಲಿ, ಪ್ರತಿ ತಿಂಗಳು ₹2,000 ಹಣವನ್ನು ಪ್ರತಿ ಕುಟುಂಬದಲ್ಲಿರುವ ಯಜಮಾನಿಗೆ ನೀಡಲಾಗುತ್ತದೆ. ಈ ಸಹಾಯದಿಂದಾಗಿ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆಗಾಗಿ , ಮಕ್ಕಳ ಶಿಕ್ಷಣಕ್ಕಾಗಿ, ಆರೋಗ್ಯ ಸೇವೆ ಸೇರಿದಂತೆ ಅನೇಕ ಖರ್ಚು – ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತಿದೆ. ಈ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿ ಆಗಲು ಸಹಾಯ ಮಾಡುತ್ತಿದೆ. ಆಗಲೇ 4 ಕಂತುಗಳು ಜಮಾ ಆಗಿದ್ದು. ಕಳೆದ ಮೂರು ದಿನದಿಂದ ಐದನೇಯ ಕಂತಿನ ಹಣವು ಕೂಡ ಖಾತೆಗೆ ಜಮಾ ಆಗುತ್ತಿದೆ . 

ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣ ಬಿಡುಗಡೆಯಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ ;

ಈಗಾಗಲೆ ರಾಜ್ಯದ ಎಲ್ಲಾ ಜಿಲ್ಲೆಯ ಪ್ರತಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣವು ಕಳೆದ ಮೂರು ದಿನದಿಂದ ಜಮಾ ಆಗುತ್ತಿದೆ . ಇಲ್ಲಿಯವರೆಗೂ ಈ ಯೋಜನೆಯ ಒಂದು ಕಂತಿನ ಹಣವು ಬಂದಿಲ್ಲದ ಮಹಿಳೆಯರು  ಪುನಃ ಆಧಾರ್ ಸೀಡಿಂಗ್ ಮಾಡಿಸಬೇಕು ಮಾಡಿಸಿದ ಬಳಿಕ ಐದನೇ ಕಂತಿನ ಹಣವು ಬರುತ್ತದೆ. ಆದರಿಂದ ಇಲ್ಲಿಯವರೆಗು ಒಂದು ಕಂತಿನ ಹಣವು ಜಮಾ ಆಗದ ಮಹಿಳೆಯರು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸೀಡಿಂಗ್ ಆಗಿದೆಯೇ ಎಂದು ಪರಿಶೀಲಿಸಿ ಆಗಿಲ್ಲವೆಂದರೆ ನಿಮ್ಮ ಹತ್ತಿರದ ಅಂಚೆ ಕಚೇರಿ ಗೆ ಭೇಟಿ ನೀಡಿ ಹೊಸ ಪೋಸ್ಟ್ ಬ್ಯಾಂಕ್ ಖಾತೆಯನ್ನು ತೆರೆಯಿರಿ.

ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವುದನ್ನು ನಿಮ್ಮ ಮೊಬೈಲ್ ನಲ್ಲಿ ಪರಿಶೀಲಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ ; 

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರತಿ ತಿಂಗಳು 2,000 ರೂ ಹಣವನ್ನು ಪಡೆಯುತ್ತಿದ್ದಾರೆ. ಅದೆ ರೀತಿ ಪಡೆದ ಹಣವನ್ನು ಅಥವಾ ಬ್ಯಾಂಕ್ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂದು ತಿಳಿಯುವುದಿಲ್ಲ. ಅದಕ್ಕಾಗಿ  ರಾಜ್ಯ ಸರ್ಕಾರವು ಈ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿದಿದೆ. ನಿಮ್ಮ ಮೊಬೈಲ್ ಮುಖಾಂತರ ರೇಷನ್ ಕಾರ್ಡ್ ನಂಬರ್ ಹಾಕಿ ಗೃಹಲಕ್ಷ್ಮಿ ಯೋಜನೆ ಹಣ ಜಮಾದ ಬಗ್ಗೆ  ಮತ್ತು ಅರ್ಜಿಯನ್ನು ಸಲ್ಲಿಸಿದ ವಿವರಗಳ ಬಗ್ಗೆ ತಿಳಿಯಬಹುದು. 

ಮೊಬೈಲ್ ಮೂಲಕ ರೇಷನ್ ಕಾರ್ಡ್ ಸಂಖ್ಯೆಯನ್ನು ಉಪಯೋಗಿಸಿ ಗೃಹಲಕ್ಷ್ಮಿ ಹಣ ಜಮಾದ ಮಾಹಿತಿಯನ್ನು  ತಿಳಿಯುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಹಂತ 1 : ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ https://mahitikanaja.karnataka.gov.in/Service/Service/3136
  • ಹಂತ 2 : ನಂತರ ಮಾಹಿತಿ ಕಣಜ ಜಾಲತಾಣದಲ್ಲಿ ಕಾಣಿಸುವ “ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ.
  • ಹಂತ 3 : ಬಳಿಕ ಅಭ್ಯರ್ಥಿಗಳು 12 ಅಂಕಿಯ ರೇಷನ್ ಕಾರ್ಡ್ ಸಂಖ್ಯೆಯನ್ನು  ಹಾಕಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. 
  • ಹಂತ 4 :  ನಂತರ ನಿಮಗೆ ಅರ್ಜಿ ಸಲ್ಲಿಸಿರುವ ದಿನಾಂಕ [Applied date],  ಅರ್ಜಿಯ ಸ್ಥಿತಿ [Status], ಅರ್ಜಿ ಅನುಮೋದನೆಯಾಗಿರುವ ದಿನಾಂಕ [Approved date] ಹಾಗು  ಹಣ ವರ್ಗಾವಣೆಯಾಗಿರುವ ವಿವರಗಳು [Payment date and amount] ಎಂದು ತೋರಿಸುತ್ತದೆ  ಅಲ್ಲಿ “Details” ಬಟನ್ ಮೇಲೆ ಕ್ಲಿಕ್ ಮಾಡಿ.
  • ಹಂತ 5 : ನಂತರ ನಿಮಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವ ತಿಂಗಳು ಯಾವ ದಿನಾಂಕದಂದು 2000 ರೂ ನಿಮ್ಮ  ಖಾತೆಗೆ ಜಮಾ ಆಗಿರುತ್ತದೆ ಎಂದು ತೋರಿಸುತ್ತದೆ.

ವಿಶೇಷ ಸೂಚನೆ 

ರೇಷನ್ ಕಾರ್ಡ ಸಂಖ್ಯೆ ನಮೂದಿಸಿ ಅರ್ಜಿಯ ಮಾಹಿತಿ ಹಾಗೂ ಹಣ ಜಮಾದ ವಿವರ ಪರಿಶೀಲಿಸುವಾಗ   ಯಾವುದೇ ಮಾಹಿತಿ ತೋರಿಸದಿದ್ದಲ್ಲಿ ಇದರ ಅರ್ಥ ನಿಮಗೆ ಈ ಯೋಜನೆಯಲ್ಲಿ ಯಾವುದೆ ಹಣವು ಜಮಾ ಅಗಿರುವುದಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ಒಂದು ಭಾರಿ ನಿಮ್ಮ ತಾಲ್ಲೂಕಿನಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ [CDPO] ಕಚೇರಿಗೆ ಭೇಟಿ ನೀಡಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಕುರಿತು ವಿಚಾರಿಸಬಹುದು. ಅಲ್ಲಿ ನಿಮಗೆ ಬೇಕಾಗಿರುವ ಎಲ್ಲ ಮಾಹಿತಿಯನ್ನು ಪಡೆಯಬಹುದು.

Leave a Reply