ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಡಬಹುದು..? ಅದರ ಲಿಮಿಟ್ ಎಷ್ಟಿರುತ್ತದೆ.! ಇಲ್ಲಿದೆ ಸಂಪೂರ್ಣ ಮಾಹಿತಿ.
ಉಳಿತಾಯ ಖಾತೆಯಲ್ಲಿ ಸರಿಯಾಗಿರುವ ದಾಖಲೆಯೊಂದಿಗೆ ಎಷ್ಟು ಬೇಕಾದರು ಹಣವನ್ನು ಠೇವಣಿ ಇಡಬಹುದು. ಒಂದು ವರ್ಷದಲ್ಲಿ ಎಷ್ಟು ಹಣಕಾಸಿನ ವ್ಯವಹಾರ ಮಾಡಿದರೆ ತೆರಿಗೆ ಉಳಿತಾಯ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ತೆರಿಗೆ ತಜ್ಞರ ಸಲಹೆಯ ಪ್ರಕಾರ ಬ್ಯಾಂಕ್, ಅಂಚೆ ಕಚೇರಿ ಹಾಗೂ ಎನ್ ಬಿ ಎಫ್ ಸಿ [NBFC] ಇದರಲ್ಲಿ ವ್ಯವಹಾರ ವಹಿವಾಟು ನಡೆಸುವಾಗ ಕಡ್ಡಾಯವಾಗಿ ಹಣಕಾಸಿನ ವರದಿಯ ಹೇಳಿಕೆ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಬ್ಯಾಂಕ್ ಅಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಅನೇಕ ಪ್ರಯೋಜನೆಗಳು ಸಿಗುತ್ತದೆ ; ಇಲ್ಲಿದೆ ಸಂಪೂರ್ಣ ಮಾಹಿತಿ.
ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದರೆ ಎಲ್ಲಾ ರೀತಿಯ ವ್ಯವಹಾರಗಳನ್ನು ಮಾಡಬಹುದು. ಕ್ರೆಡಿಟ್ ಕಾರ್ಡ್, ವಿದೇಶೀ ವಿನಿಮಯ ಖರಿದಿಗಳು, ಸ್ಥಿರ ಠೇವಣಿ [Fixed deposit], ಮ್ಯೂಚುಯಲ್ ಫಂಡ್ ಇತ್ಯಾದಿ… ಇದೇ ರೀತಿ ಹಲವಾರು ಸೇವೆಗಳನ್ನು ಪಡೆಯಬಹುದು.
ಚಾಲ್ತಿ ಖಾತೆ ಹಾಗು ಸಮಯ ಠೇವಣಿ ಖಾತೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಖಾತೆಗಳಲ್ಲಿ ವರ್ಷಕ್ಕೆ ಹತ್ತು ಲಕ್ಷಕ್ಕಿಂತ ಜಾಸ್ತಿ ವ್ಯವಹಾರ ನಡೆಸಿದರೆ ಅಂದರೆ ಠೇವಣಿ ಇಟ್ಟಿದ್ದರೆ ಅಥವಾ ಹಣವನ್ನು ಹಿಂಪಡೆದರು ಸಹ ಅವುಗಳನ್ನು ವರದಿ ಮಾಡಬೇಕೆಂದು ತಜ್ಞರು ತಿಳಿಸಿದ್ದಾರೆ.
ಗ್ರಾಹಕರು ಚಾಲ್ತಿ ಖಾತೆ ಹಾಗು ಸಮಯ ಠೇವಣಿ ಖಾತೆಯನ್ನು ಹೊರತು ಪಡಿಸಿ ಉಳಿದ ಯಾವುದೇ ಖಾತೆಗಳಲ್ಲಿ ಒಂದು ವರ್ಷದಲ್ಲಿ ೧೦ ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರ ನಡೆಸುವ ಅವಕಾಶ ಇರುವುದಿಲ್ಲ ಒಂದು ವೇಳೆ ನಡೆಸಿದರೆ ಇದನ್ನು ಆದಾಯ ತೆರಿಗೆ ಇಲಾಖೆ ಗೆ ವರದಿ ಮಾಡಬೇಕಾಗುತ್ತದೆ. ಇದರಿಂದ ತೆರಿಗೆಯನ್ನು ಸರಿಯಾಗಿ ಪಾವತಿ ಮಾಡುತ್ತಿದ್ದಾರೆ ಇಲ್ಲವೆ ಮತ್ತು ಆ ಹಣಕ್ಕೆ ಸರಿಯಾದ ದಾಖಲೆಗಳು ಇದೆಯೇ ಇಲ್ಲವೇ ಎಂದು ಪರಿಶೀಲಿಸಲು ಆದಾಯ ತೆರಿಗೆ ಇಲಾಖೆ ಗೆ ಸುಲಭವಾಗುತ್ತದೆ.
ಯಾವುದೇ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಒಂದು ವರ್ಷಕ್ಕೆ 10 ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರ ನಡೆಸಿದರೆ ಸ್ವತಃ ಬ್ಯಾಂಕ್ ನವರೆ ಆದಾಯ ತೆರಿಗೆ ಇಲಾಖೆ ಗೆ ವರದಿ ಮಾಡುತ್ತಾರೆ. ಇದರಿಂದ ಗ್ರಾಹಕರು ಹಣದ ಮಿತಿಯನ್ನು ಮೀರುವ ಮೊದಲೇ ಎಚ್ಚರಿಕೆಯಿಂದ ಇರಬೇಕು. ಇಲ್ಲದ್ದಿದ್ದರೆ ಹೆಚ್ಚಿನ ತೆರಿಗೆಯನ್ನು ಪಾವತಿ ಮಾಡುವ ಅನಿವಾರ್ಯತೆ ಬರುತ್ತದೆ. ಒಂದಕ್ಕೆ ಮೂರರಷ್ಟು ದಂಡವನ್ನು ಸಹ ಪಾವತಿ ಮಾಡಬೇಕಾಗುತ್ತದೆ.
ಚಾಲ್ತಿ ಖಾತೆ ಹೊಂದಿರುವ ಗ್ರಾಹಕರು ಒಂದು ವರ್ಷದಲ್ಲಿ 50 ಲಕ್ಷಗಳ ವರೆಗೆ ವ್ಯವಹಾರ ವಹಿವಾಟು ನಡೆಸಬಹುದು, ಅದಕ್ಕಿಂತ ಹೆಚ್ಚಿದ್ದರೆ ಅದನ್ನು ಸಹ ಆದಾಯ ತೆರಿಗೆ ಇಲಾಖೆ ಗೆ ವರದಿ ಮಾಡಬೇಕಾಗುತ್ತದೆ. ಇದೇ ರೀತಿ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಸಹ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಲ್ಲಿ ಒಂದು ಲಕ್ಷ ಮೀರಿದರೆ ಇದನ್ನು ಸಹ ವರದಿ ಮಾಡಬೇಕಾಗುತ್ತದೆ. ಆದರಿಂದ ಯಾವುದೇ ರೀತಿ ಹಣಕಾಸಿನ ವ್ಯವಹಾರ ಮಾಡುವ ಮೊದಲು ನಿಯಮಗಳನ್ನು ತಿಳಿದು ವ್ಯವಹಾರ ನಡೆಸಿದರೆ ನೀವು ಸಹ ತೆರಿಗೆ ಅಥವಾ ದಂಡ ಪಾವತಿ ಮಾಡುವುದರಿಂದ ಉಳಿಯಬಹುದು.