ಮೈಸೂರು ರೈಲ್ವೆ ಸಹಕಾರ ಬ್ಯಾಂಕ್ ನೇಮಕಾತಿ 2023ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ| ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ಲೇಖನದಲ್ಲಿ ರೈಲ್ವೇ ಸಹಕಾರಿ ಬ್ಯಾಂಕ್ ಮೈಸೂರು( Railway Cooperative Bank Mysore ) 2023 ರ ನೇಮಕಾತಿಯ ಅಡಿಯಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈಗಾಗಲೇ ರೈಲ್ವೇ ಸಹಕಾರಿ ಬ್ಯಾಂಕ್ ವತಿಯಿಂದ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಂಸ್ಥೆ : ಮೈಸೂರು ರೈಲ್ವೆ ಸಹಕಾರ ಬ್ಯಾಂಕ್

ಪ್ರಮುಖ ವಿವರಗಳು :

ವಿಧ :ಸರ್ಕಾರಿ ಉದ್ಯೋಗಗಳು
ಹುದ್ದೆಯ ಹೆಸರು :ವಿವಿಧ
ಒಟ್ಟು ಖಾಲಿ ಹುದ್ದೆಗಳು :21
ಸ್ಥಳ :ಕರ್ನಾಟಕ( ಮೈಸೂರು)
ಅರ್ಜಿ ಸಲ್ಲಿಸುವ ವಿಧಾನ :ಆಫ್ಲೈನ್

ಖಾಲಿ ಹುದ್ದೆಗಳ ವಿವರಗಳು :

  1. ಬ್ರಾಂಚ್ ಮ್ಯಾನೇಜರ್ : 1
    ಲೆಕ್ಕಪರಿಶೋಧಕ : 4
    ಹಿರಿಯ ಕ್ಯಾಷಿಯರ್ಗಳು : 1
    ಕಂಪ್ಯೂಟರ್ ಮೇಲ್ವಿಚಾರಕರು : 1
    ಕಿರಿಯ ಗುಮಾಸ್ತರು : 10
    ಕಚೇರಿ ಸಹಾಯಕರು : 4

ಶೈಕ್ಷಣಿಕ ಅರ್ಹತೆ :

ಬ್ರಾಂಚ್ ಮ್ಯಾನೇಜರ್ :  ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಅಂಗೀಕೃತಗೊಂಡ ಸಂಸ್ಥೆಯಿಂದ ಮೂಲ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಮಾಡಿರಬೇಕು.

ಲೆಕ್ಕಪರಿಶೋಧಕರು  – ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು (ವಾಣಿಜ್ಯ, ಸಹಕಾರ/ ನಿರ್ವಹಣೆ ಪದವಿ ಹೊಂದಿರಬೇಕು). ಅಂಗೀಕೃತಗೊಂಡ ಸಂಸ್ಥೆಯಿಂದ ಮೂಲ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಮಾಡಿರಬೇಕು.

ಹಿರಿಯ ಕ್ಯಾಷಿಯರ್ಗಳು – ಪದವಿ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಅಂಗೀಕೃತಗೊಂಡ ಸಂಸ್ಥೆಯಿಂದ ಮೂಲ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಮಾಡಿರಬೇಕು.

ಕಂಪ್ಯೂಟರ್ ಮೇಲ್ವಿಚಾರಕರು – ಕಂಪ್ಯೂಟರ್ ಅಪ್ಲಿಕೇಷನ್, ಬಿ.ಎಸ್.ಸಿ/ ಬಿ.ಸಿ.ಎ/ಬಿ.ಇ ಇನ್ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿರಬೇಕು.

ಕಿರಿಯ ಗುಮಾಸ್ತರು – ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಅಂಗೀಕೃತಗೊಂಡ ಸಂಸ್ಥೆಯಿಂದ ಮೂಲ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಮಾಡಿರಬೇಕು.

ಕಛೇರಿ ಸಹಾಯಕರು – ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ :

  • ಅಭ್ಯರ್ಥಿಯು ಕನಿಷ್ಠ 18 ವರ್ಷಗಳಿಂದ ಗರಿಷ್ಠ 35 ವರ್ಷಗಳನ್ನು ಮೀರಿರಬಾರದು.

ವೇತನ ಶ್ರೇಣಿಯ ವಿವರಗಳು :

  • ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.18000-35400/- ಗಳನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ :

  • SC/ST/ ಪ್ರವರ್ಗ -I/ Ex-Servicemen ಅಭ್ಯರ್ಥಿಗಳು: ರೂ.500/-ಸಾಮಾನ್ಯ/ಕ್ಯಾಟ್-2A/2B/3A & 3B ಅಭ್ಯರ್ಥಿಗಳು: ರೂ.1000/-

ಆಯ್ಕೆ ಪ್ರಕ್ರಿಯೆ :

  1. ಲಿಖಿತ ಪರೀಕ್ಷೆ
  2. ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ :

  • ಅರ್ಹ ಹಾಗೂ ಆಸಕ್ತವುಳ್ಳ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜೊತೆಗೆ ಕೇಳಲಾದ ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು :ಸದಸ್ಯ ಕಾರ್ಯದರ್ಶಿ,ನೇಮಕಾತಿ ಸಮಿತಿ,ರೈಲ್ವೆ ಸಹಕಾರ ಬ್ಯಾಂಕ್ ಲಿಮಿಟೆಡ್,ಶೇಷಾದ್ರಿ ಅಯ್ಯರ್ ರಸ್ತೆ,ಮೈಸೂರು – 570001

ಪ್ರಮುಖ ಸೂಚನೆಗಳು:

ಅಭ್ಯರ್ಥಿಗಳು ತಮ್ಮ ಸ್ವಾ ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಲು ಸಲಹೆ ನೀಡಲಾಗುತ್ತದೆ ಅರ್ಜಿಯನ್ನು ಸಲ್ಲಿಸುವ ಮೊದಲು ನೀಡಲಾದ ಎಲ್ಲ ಮಾಹಿತಿಯನ್ನು ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸಲು ಸೂಚಿಸಲಾಗುತ್ತದೆ.

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :07-06-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :28-07-2023

Leave a Reply