ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನೇಮಕಾತಿ 2023 – ಪ್ರಥಮ ದರ್ಜೆ ಸಹಾಯಕ, , ದ್ವಿತೀಯ ದರ್ಜೆ ಸಹಾಯಕ, ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿನ ವಿವಿಧ ಹುದ್ದೆಗಳಿಗೆ ಹೈದರಾಬಾದ್-ಕರ್ನಾಟಕ ವ್ಯಾಪ್ತಿಯ ಸ್ಥಳೀಯ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ.
ಸಂಸ್ಥೆ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
ಪ್ರಮುಖ ವಿವರಗಳು :
ವಿಧ : | ಸರ್ಕಾರಿ ಉದ್ಯೋಗಗಳು |
ಹುದ್ದೆಯ ಹೆಸರು : | ಪ್ರಥಮ ದರ್ಜೆ ಸಹಾಯಕ, , ದ್ವಿತೀಯ ದರ್ಜೆ ಸಹಾಯಕ, |
ಒಟ್ಟು ಖಾಲಿ ಹುದ್ದೆಗಳು : | 32 |
ಸ್ಥಳ : | ಮೈಸೂರ್ |
ಅರ್ಜಿ ಸಲ್ಲಿಸುವ ವಿಧಾನ : | ಆಫ್‌ಲೈನ್ |
ಖಾಲಿ ಹುದ್ದೆಗಳ ವಿವರಗಳು :
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
ಪ್ರಥಮ ದರ್ಜೆ ಸಹಾಯಕ | 4 |
ಡೇಟಾ ಎಂಟ್ರಿ ಆಪರೇಟರ್ | 5 |
ದ್ವಿತೀಯ ದರ್ಜೆ ಸಹಾಯಕ | 8 |
ಬೆರಳಚ್ಚುಗಾರ ಮತ್ತು ಸಹಾಯಕ | 1 |
ವಾಹನ ಚಾಲಕ | 1 |
ಎಲೆಕ್ಟ್ರಿಷಿಯನ್ | 1 |
ಪ್ಲಂಬರ್ | 1 |
ಪರಿಚಾರಕ | 2 |
ಗ್ಯಾಂಗ್ ಮೆನ್ | 1 |
ಸೇವಕ | 5 |
ಸ್ವೀಪರ್ | 2 |
ಹೆಲ್ಪರ್ | 1 |
ಶೈಕ್ಷಣಿಕ ಅರ್ಹತೆ :
1] ಪ್ರಥಮ ದರ್ಜೆ ಸಹಾಯಕ
- ಯು.ಜಿ.ಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದಾದರೊಂದು ಸ್ನಾತಕ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯ ಮೂಲಕ ಕಂಪ್ಯೂಟರ್ ಕಾರ್ಯ ನಿರ್ವಹಣಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಆಫೀಸ್ ಆಟೋಮೇಷನ್ ಟೂಲ್ಸ್ ಮೂಲಕ ಕನಿಷ್ಠ 05 ವರ್ಷಗಳ ಕಾರ್ಯನಿರ್ವಹಣಾ ಅನುಭವ ಹೊಂದಿರಬೇಕು.
2] ಡೇಟಾ ಎಂಟ್ರಿ ಆಪರೇಟರ್
- ಯು.ಜಿ.ಸಿ ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದಾದರೊಂದು ಸ್ನಾತಕ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಡಾಟ ಎಂಟ್ರಿ ಆಪರೇಟರ್/ ಡಾಟ ಎಂಟ್ರಿ ಆಪರೇಟರ್-ಕಂ-ಅಸಿಸ್ಟಂಟ್‌ರಾಗಿ ಸರ್ಕಾರದ ವಿಶ್ವವಿದ್ಯಾನಿಲಯಗಳ/ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಐದು ವರ್ಷಗಳ ಕಾರ್ಯನುಭವ ಇರತಕ್ಕದ್ದು.
3] ದ್ವಿತೀಯ ದರ್ಜೆ ಸಹಾಯಕ
- ಯು.ಜಿ.ಸಿ ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದಾದರೊಂದು ಸ್ನಾತಕ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಕನಿಷ್ಟ ಐದು ವರ್ಷಗಳ ಸೇವೆಯನ್ನು ಸರ್ಕಾರದ/ ವಿಶ್ವವಿದ್ಯಾನಿಲಯಗಳ /ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರತಕ್ಕದ್ದು.
4] ಬೆರಳಚ್ಚುಗಾರ ಮತ್ತು ಸಹಾಯಕ
- ಯು.ಜಿ.ಸಿ ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದಾದರೊಂದು ಸ್ನಾತಕ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಟೈಪಿಸ್ಟ್ ಕಂ ದ್ವಿತೀಯ ದರ್ಜೆ ಸಹಾಯಕರಾಗಿ ಕನಿಷ್ಠ ಐದು ವರ್ಷಗಳ ಸೇವೆಯನ್ನು ಸರ್ಕಾರ/ವಿಶ್ವವಿದ್ಯಾನಿಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರತಕ್ಕದ್ದು. ಸರ್ಕಾರದ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ನಡೆಸಲಾಗುವ ಕನ್ನಡ ಮತ್ತು ಇಂಗ್ಲೀಷ್ ಸೀನಿಯರ್ ಗ್ರೇಡ್ ಬೆರಳಚ್ಚು ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರತಕ್ಕದ್ದು.
5] ವಾಹನ ಚಾಲಕ
- ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಚಾಲ್ತಿಯಲ್ಲಿರುವ ಭಾರೀ ವಾಹನ ಚಾಲನೆ ಪರವಾನಿಗೆ ಹೊಂದಿದ್ದು, ಪ್ರಥಮ ಚಿಕಿತ್ಸೆ ಬಗ್ಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ದೃಢೀಕರಣ ಪತ್ರವನ್ನು ಪಡೆದಿರಬೇಕು ಮತ್ತು ಕನಿಷ್ಠ ಮೂರು ವರ್ಷಗಳ ಭಾರೀ ವಾಹನ ಚಾಲನಾ ಅನುಭವ ಹೊಂದಿರತಕ್ಕದ್ದು.
6] ಎಲೆಕ್ಟ್ರಿಷಿಯನ್
- ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಡಿಪ್ಲೋಮಾ ಇನ್ ಎಲೆಕ್ನಿಕಲ್ ಇಂಜಿನಿಯರಿಂಗ್ ಅಥವಾ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ನಡೆಸಲಾಗುವ ಐಟಿಐ ಎಲೆಕ್ಟಿಕಲ್ ಕೋರ್ಸನಲ್ಲಿ ತೇರ್ಗಡೆ ಹೊಂದಿರಬೇಕು ಹಾಗೂ ಎಲೆಕ್ನಿಷಿಯನ್ ಕಾರ್ಯ ನಿರ್ವಹಣೆಯಲ್ಲಿ ಕನಿಷ್ಠ ಐದು ವರ್ಷಗಳ ಸೇವಾನುಭವವನ್ನು ಹೊಂದಿರಬೇಕು.
7] ಪ್ಲಂಬರ್
- ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪ್ಲಂಬಿಂಗ್ ಮತ್ತು ಸಿವಿಲ್ ಕಾರ್ಯ ನಿರ್ವಹಣೆಯಲ್ಲಿ ಕನಿಷ್ಠ ಎರಡು ವರ್ಷಗಳ ಸೇವಾನುಭವವನ್ನು ಹೊಂದಿರಬೇಕು ಅಥವಾ ಏಳನೇ ತರಗತಿ ಉತ್ತೀರ್ಣರಾಗಿದ್ದು, ಪ್ಲಂಬಿಂಗ್ ಮತ್ತು ಸಿವಿಲ್ ಕಾರ್ಯ ನಿರ್ವಾಹಣೆಯಲ್ಲಿ ಕನಿಷ್ಠ ಐದು ವರ್ಷಗಳ ಸೇವಾನುಭವವನ್ನು ಹೊಂದಿರತಕ್ಕದ್ದು.
8] ಪರಿಚಾರಕ
- ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
9] ಗ್ಯಾಂಗ್ ಮನ್
- ಹತ್ತನೇ ತರಗತಿ ಅಥವಾ ಏಳನೇ ತರಗತಿಯಲ್ಲಿ ತೇರ್ಗಡೆ ಹೊಂದಿ, ಗ್ಯಾಂಗ್ ಮನ್ ಕಾರ್ಯದಲ್ಲಿ ಕನಿಷ್ಠ ಐದು ವರ್ಷಗಳ ಅನುಭವ ಹೊಂದಿರಬೇಕು.
10] ಸೇವಕ, ಸ್ವೀಪರ್, ಹೆಲ್ಪರ್
- ಏಳನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು.
ವಯಸ್ಸಿನ ಮಿತಿ :
- ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.
- ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳು – ಗರಿಷ್ಠ 40 ವರ್ಷ
- ಹಿಂದುಳಿದ ವರ್ಗದ ಅಭ್ಯರ್ಥಿಗಳು – ಗರಿಷ್ಠ 38 ವರ್ಷ
- ಸಾಮಾನ್ಯ ಅಭ್ಯರ್ಥಿಗಳು – ಗರಿಷ್ಠ 35 ವರ್ಷ
ವೇತನ ಶ್ರೇಣಿಯ ವಿವರಗಳು :
ಹುದ್ದೆ | ವೇತನ |
ಪ್ರಥಮ ದರ್ಜೆ ಸಹಾಯಕ | 30,350-58,250 |
ಡೇಟಾ ಎಂಟ್ರಿ ಆಪರೇಟರ್ | 27,650-52,650 |
ದ್ವಿತೀಯ ದರ್ಜೆ ಸಹಾಯಕ | 21,400-42,000 |
ಬೆರಳಚ್ಚುಗಾರ ಮತ್ತು ಸಹಾಯಕ | 21,400-42,000 |
ವಾಹನ ಚಾಲಕ | 21,400-42,000 |
ಎಲೆಕ್ಟ್ರಿಷಿಯನ್ | 21,400-42,000 |
ಪ್ಲಂಬರ್ | 21,400-42,000 |
ಪರಿಚಾರಕ | 19,950-37,900 |
ಗ್ಯಾಂಗ್ ಮೆನ್ | 18,600-32,600 |
ಸೇವಕ | 17,000-28,950 |
ಸ್ವೀಪರ್ | 17,000-28,950 |
ಹೆಲ್ಪರ್ | 17,000-28,950 |
ಅರ್ಜಿ ಶುಲ್ಕ :
- ಎಸ್ಸಿ, ಎಸ್ಟಿ, ಪ್ರವರ್ಗ 1ರ ಅಭ್ಯರ್ಥಿಗಳು – ರೂ. 500
- ಉಳಿದ ಅಭ್ಯರ್ಥಿಗಳು – ರೂ. 1000
- ಶುಲ್ಕ ಪಾವತಿಸುವ ವಿಧಾನ : ನಿಗದಿತ ಅರ್ಜಿ ಶುಲ್ಕವನ್ನು ವಿಶ್ವವಿದ್ಯಾನಿಲಯದ ಬ್ಯಾಂಕ್ ಖಾತೆ A/c No: 50100316845801, IFSC Code: HDFC0003733, HDFC Bank, Kuvempunagara Branch, Mysuru,ಗೆ ಆನ್‌ಲೈನ್ (Online) ಮೂಲಕ ಪಾವತಿಸಿ, ಅದರ ರಶೀದಿಯನ್ನು ಅರ್ಜಿಯ ಜೊತೆಯಲ್ಲಿ ಲಗತ್ತಿಸಿ, ಅರ್ಜಿಯೊಂದಿಗೆ ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆ :
- ಅರ್ಹತಾ ಪರೀಕ್ಷೆ
- ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ :
- ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
- ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ವಿಶ್ವವಿದ್ಯಾನಿಲಯವು ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
- ವಿಶ್ವವಿದ್ಯಾನಿಲಯದ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
- ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
- ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
- ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿಯನ್ನು ಎಂಟುಯ ಸೆಟ್‌ಗಳಲ್ಲಿ ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ನೋಂದಣಿ ಅಂಚೆ ಅಥವಾ ಖುದ್ದಾಗಿ ಹಾಜರಾಗಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ :
- ಕುಲಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು-570 006
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : | 16-08-2023 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : | 30-09-2023 |