ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ | ಇಂದೇ ಅರ್ಜಿ ಸಲ್ಲಿಸಿ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯಿಂದ ಬಡ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಹಲವು ಯೋಜನೆಯನ್ನು ಜಾರಿಗೆ ತಂದಿದೆ. ಅವುಗಳೆಂದರೆ ವಿದ್ಯಾರ್ಥಿವೇತನ, ಶುಲ್ಕ ಮರಪಾವತಿ , ವಿದ್ಯಾಸಿರಿ ಹಾಗು ಊಟ ಮತ್ತು ವಸತಿ ಸಹಾಯದ ಯೋಜನೆಗಳಿಗಾಗಿ ಅರ್ಹವಿರುವ ವಿದ್ಯಾರ್ಥಿಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ. 

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗೆ ಅಗತ್ಯವಿರುವ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಹಾಗು ಬೇಕಾಗಿರುವ ದಾಖಲೆಗಳ ಬಗ್ಗೆ ವಿವರಗಳನ್ನು ಕೆಳಗೆ ನೀಡಲಾಗಿದೆ .

ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ವಿದ್ಯಾರ್ಥಿವೇತನ ಇಲ್ಲಿದೆ ಸಂಪೂರ್ಣ ಮಾಹಿತಿ : 

ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅರ್ಥಿಕವಾಗಿ ನೆರವು ನೀಡುವ ಸಲುವಾಗಿ ಈ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಅರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸವನ್ನು ಮುಂದುವರೆಸಬೇಕೆಂಬ ಉದ್ದೇಶದಿಂದ ಸರ್ಕಾರವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಂದ ಈ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹವಿರುವ ವಿದ್ಯಾರ್ಥಿಗಳು ನೀಡಲಾದ ಯೋಜನೆಯ ಲಾಭವನ್ನು  ಪಡೆಯಬಹುದು.

ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಇರಬೇಕಾದ ಅರ್ಹತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ :  

ಮೆಟ್ರಿಕ್ ನಂತರದ ಉನ್ನತ ಶಿಕ್ಷಣ ಮಾಡುತ್ತಿರುವ ಆರ್ಹವಿರುವ ಹಿಂದುಳಿದ ವರ್ಗಕ್ಕೆ [OBC] ಸೇರಿದ ವಿದ್ಯಾರ್ಥಿಗಳು ಮತ್ತು ಪ್ರವರ್ಗ – 1 ಕ್ಕೆ ಸೇರಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

ಈ ವಿದ್ಯಾರ್ಥಿವೇತನ ಮಾಡಿಸುವುದರಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನಗಳು ಬಗ್ಗೆ ಮಾಹಿತಿ ಇಲ್ಲಿದೆ : 

ವಿದ್ಯಾಸಿರಿ ವಿದ್ಯಾರ್ಥಿವೇತನ , ಶುಲ್ಕ ಮರಪಾವತಿಗೆ ಹಾಗು ಊಟ ಮತ್ತು ವಸತಿ ಯೋಜನೆ ಇವುಗಳು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳಾಗಿದೆ.

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ : 

  • ಆಧಾರ್ ಗುರುತಿನ ಚೀಟಿ
  • ದೂರವಾಣಿ ಸಂಖ್ಯೆ
  • ವಿದ್ಯಾರ್ಥಿಯ ಇಮೇಲ್ ಐಡಿ
  • ವಿದ್ಯಾರ್ಥಿಯ ಎಸ್ ಎಸ್ ಎಲ್ ಸಿ ನೋಂದಣಿಯ ಸಂಖ್ಯೆ
  • ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ
  • ಒಂದು ವೇಳೆ ವಿದ್ಯಾರ್ಥಿಯು ವಿಕಲಚೇತನರಾಗಿದ್ದರೆ    ಯು ಡಿ ಐ ಡಿ ಸಂಖ್ಯೆ
  • ವಾಸುದೃಢೀಕರಣ ಪತ್ರ 
  • ವಿದ್ಯಾರ್ಥಿಯ ಕಾಲೇಜಿನ ದಾಖಲಾತಿ ಸಂಖ್ಯೆ
  • ಸಂಬಂಧ ಪಟ್ಟಿರುವ ದಾಖಲೆಗಳ ಇ ದೃಢೀಕರಣದ ಸಂಖ್ಯೆ [ಅಗತ್ಯವಿದ್ದಲ್ಲಿ] 
  • ವಿದ್ಯಾರ್ಥಿ ನಿಲಯದ ವಿವರಗಳು [ ಅಗತ್ಯವಿದ್ದಲ್ಲಿ]

ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ : 

ವಿದ್ಯಾರ್ಥಿಗಳು ಅಗತ್ಯವಿರುವ ದಾಖಲೆಯೊಂದಿಗೆ SSP SCHOLARSHIP ಪೋರ್ಟಲ್ ನ ಅಧಿಕೃತ ವೆಬ್ಸೈಟ್ https://ssp.postmatric.karnataka.gov.in ಮೂಲಕ ಕೇಳಿರುವ ವಿವರಗಳನ್ನು ಭರ್ತಿ ಮಾಡಿ ನಿಗದಿ ಪಡಿಸಿರುವ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕು.

ಈ ವಿದ್ಯಾರ್ಥಿವೇತನ ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 – 01 – 2024 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 

ಇಲಾಖೆಯ ಸಹಾಯವಾಣಿ ಸಂಖ್ಯೆ : 8050770005

ದೂರವಾಣಿ ಸಂಖ್ಯೆ : 1902 

ಇಮೇಲ್ ವಿಳಾಸ : bcwdhelpline@gmail.com

Leave a Reply